ADVERTISEMENT

ಎಬಿಸಿ ಅಧ್ಯಕ್ಷರಾಗಿ ದೇವವ್ರತ ಮುಖರ್ಜಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:30 IST
Last Updated 24 ಸೆಪ್ಟೆಂಬರ್ 2021, 22:30 IST
ದೇವವ್ರತ ಮುಖರ್ಜಿ
ದೇವವ್ರತ ಮುಖರ್ಜಿ   

ಬೆಂಗಳೂರು: ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಶನ್‌ (ಎಬಿಸಿ) ಸಂಸ್ಥೆಯ 2021–22ನೇ ಸಾಲಿನ ಅಧ್ಯಕ್ಷರಾಗಿ ಯುನೈಟೆಟ್‌ ಬ್ರೆವರೀಸ್‌ ಲಿಮಿಟೆಡ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ದೇವವ್ರತ ಮುಖರ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉದ್ಯಮಿಯಾಗಿ 27 ವರ್ಷ ಅನುಭವ ಇರುವ ಅವರು, ಯುನಿ ಲಿವರ್‌ ಇಂಡಿಯಾ ಮೂಲಕ ವೃತ್ತಿ ಯನ್ನು ಆರಂಭಿಸಿದ್ದರು. 1998ರಲ್ಲಿ ಕೋಕೊ ಕೋಲಾ ಸಂಸ್ಥೆ ಸೇರಿದ ಅವರು, ಭಾರತ, ಕೊರಿಯಾ ಹಾಗೂ ನೈರುತ್ಯ ಏಷ್ಯಾದಲ್ಲಿ ಆ ಸಂಸ್ಥೆಯ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. 2018ರಲ್ಲಿ ಹಿಂದೂಸ್ತಾನ್‌ ಟೈಮ್ಸ್‌ ಸಮೂಹವನ್ನು ಸೇರಿದ ಅವರು, ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗಮನಾರ್ಹ ಕೆಲಸ ಮಾಡಿದ್ದಾರೆ. 2019ರಲ್ಲಿ ಯುನೈಟೆಡ್‌ ಬ್ರೆವರೀಸ್‌ ಸಮೂಹವನ್ನು ಸೇರಿದ್ದಾರೆ.ಆನಂದ್ ಬಜಾರ್‌ ಪತ್ರಿಕಾ ಸಮೂಹ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಪ್ರತಾಪ್‌ ಪವಾರ್‌ (ಸಕಾಳ್‌ ಪೇಪರ್ಸ್‌) ಉಪಾಧ್ಯಕ್ಷರಾಗಿ ಹಾಗೂ ಹೊರ್ಮುಜ್ದ್‌ ಮಸಾನಿಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

2021–22 ಸಾಲಿನ ಎಬಿಸಿಯ ಆಡಳಿತ ಮಂಡಳಿ ಸದಸ್ಯರ ವಿವರ ಇಂತಿದೆ.

ಜಾಹೀರಾತುದಾರರ ಪ್ರತಿ ನಿಧಿಗಳು: ದೇವವ್ರತ ಮುಖರ್ಜಿ (ಅಧ್ಯಕ್ಷ), ಕರುಣೇಶ್‌ ಬಜಾಜ್‌ (ಐಟಿಸಿ ಲಿ.), ಅನಿರುದ್ಧ ಹಲ್ದಾರ್‌ (ಟಿವಿಎಸ್‌ ಮೋಟಾರ್‌ ಕಂಪನಿ ಲಿಮಿಟೆಡ್‌), ಶಶಾಂಕ್‌ ಶ್ರೀವಾತ್ಸವ್‌ (ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌)

ಪ್ರಕಾಶಕರ ಪ್ರತಿನಿಧಿಗಳು:ಪ್ರತಾಪ್‌ ಪವಾರ್‌–ಉಪಾಧ್ಯಕ್ಷ, ರಿಯಾದ್‌ ಮ್ಯಾಥ್ಯು (ಮಲಯಾಳ ಮನೋರಮಾ ಕಂ. ಲಿ.)– ಗೌರವ ಕಾರ್ಯದರ್ಶಿ, ದೇವೇಂದ್ರ ವಿ. ದಾರ್‍ದಾ (ಲೋಕಮತ್‌ ಮೀಡಿಯಾ ಪ್ರೈ.ಲಿ), ಹೊರ್ಮಸ್ಜಿ ಎನ್‌. ಕ್ಯಾಮಾ (ದಿ ಬಾಂಬೆ ಸಮಾಚಾರ್‌ ಪ್ರೈ.ಲಿ), ಶೈಲೇಶ್‌ ಗುಪ್ತಾ (ಜಾಗರಣ್‌ ಪ್ರಕಾಶನ್‌ ಲಿ.), ಪ್ರವೀಣ್ ಸೋಮೇಶ್ವರ್‌ (ಹಿಂದೂಸ್ತಾನ್‌ ಟೈಮ್ಸ್‌ ಮೀಡಿಯಾ ಲಿ), ಮೋಹಿತ್ ಜೈನ್‌ (ಬೆನೆಟ್‌ ಎಂಡ್‌ ಕೋಲಮನ್‌ ಆಂಡ್‌ ಕಂಪನಿ ಲಿ.), ಧ್ರುವ ಮುಖರ್ಜಿ (ಎಬಿಪಿ ಪ್ರೈ.ಲಿ)

ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳು:ವಿಕ್ರಂ ಸಖುಜಾ (ಮ್ಯಾಡಿಸನ್ ಕಮ್ಯುನಿಕೇಶನ್ಸ್ ಪ್ರೈ.ಲಿ)– ಗೌರವ ಖಜಾಂಚಿ, ಶಶಿಧರ ಸಿನ್ಹಾ (ಐಪಿಜಿ ಮೀಡಿಯಾ ಬ್ರಾಂಡ್ಸ್‌, ಮೀಡಿಯಾ ಬ್ರಾಂಡ್ಸ್‌ ಪ್ರೈ.ಲಿ), ಶ್ರೀನಿವಾಸನ್‌ ಕೆ.ಸ್ವಾಮಿ (ಆರ್‌ಕೆ ಸ್ವಾಮಿ ಬಿಬಿಡಿಒ ಪ್ರೈ.ಲಿ), ಆಶಿಶ್‌ ಭಾಸಿನ್‌ (ಡೆನ್‌ತ್ಸು ಏಜೀಸ್‌ ನೆಟ್‌ವರ್ಕ್‌ ಕಮ್ಯುನಿಕೇಶನ್ಸ್‌ ಪ್ರೈ.ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.