ಮಂಡ್ಯ: ಯೋಧ ಹುತಾತ್ಮನಾಗಿ 24 ಗಂಟೆ ಕಳೆದಿದೆ ಒಬ್ಬ ಜನಪ್ರತಿನಿಧಿಯೂ ಊರಿಗೆ ಬಂದಿಲ್ಲ ಎಂದು ಬನ್ನೂರಿನಿಂದ ಗುಡಿಗೆರೆಗೆ ಬಂದಿರುವ ಯುವಕ ಅಭಿಜಿತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರ ಯೋಧ ಗುರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಅವರ ಒಂದು ಫ್ಲೆಕ್ಸ್ ಎಲ್ಲಿಯೂ ಇಲ್ಲ. ಯೋಧನ ಮನೆ ಎಲ್ಲಿದೆ ಎಂದು ಹುಡುಕಿಕೊಂಡುನಾನು ಬನ್ನೂರಿನಿಂದಬಂದಿದ್ದೇನೆ. ಎಂಪಿ, ಎಂಎಲ್‌ಎ ಎನಿಸಿಕೊಂಡ ಜನಪ್ರತಿನಿಧಿಗಳೇನು ಕತ್ತೆ ಹಲ್ಲುಜ್ಜೋಕೆ ಹೊಗಿದ್ದಾರಾ? ಎಂದು ಗರಂ ಆಗಿದ್ದಾರೆ.
ಇಂಥ ಕಾರ್ಯಗಳಿಗೆ ಬಾರದ ಅವರು ಇನ್ಯಾವ ಕಾರ್ಯಗಳಿಗೆ ಬರುತ್ತಾರೆ.ಹುತಾತ್ಮ ಯೋಧನ ಮನೆ ಬಳಿ ಬಂದಿರುವ ಜನರುಬಿಸಿಲಿನಲ್ಲಿ ನಿಂತು ಗೋಳಾಡುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇನ್ನೇನು ಮಾಡುತ್ತಾರೆ ಇವರು ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೊ ಇದೀಗ ಸಾಕಷ್ಟು ವೈರಲ್ ಆಗಿದೆ.
* ಇವನ್ನೂ ಒದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.