ಬೆಂಗಳೂರು: ಭಾರತದ ಮೂರೂ ಸೇನೆಗಳಿಗಾಗಿ ಲೋರಾ(ಲಾಂಗ್ ರೇಂಜ್ ಅಟ್ಯಾಕ್) ಶಸ್ತ್ರಾಸ್ತ್ರವನ್ನು ದೇಶೀಯವಾಗಿ ಉತ್ಪಾದಿಸಲು ಮತ್ತು ಸರಬರಾಜು ಮಾಡಲು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್(ಐಎಐ) ಜೊತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಒಡಂಬಡಿಕೆ ಮಾಡಿಕೊಂಡಿದೆ.
ಭಾರತ ಮತ್ತು ಇಸ್ರೇಲ್ ದೇಶಗಳ ಪಾಲುದಾರಿಕೆಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಅತ್ಯುನ್ನತ ದರ್ಜೆಯ ತಂತ್ರಜ್ಞಾನ ಬೆಳವಣಿಗೆಯಾಗಿದೆ. ಇದರ ಫಲಿತಾಂಶವಾಗಿ ಈ ಒಪ್ಪಂದ ಏರ್ಪಟ್ಟಿದೆ.
ಐಎಐನ ಮಲಮ್ ವಿಭಾಗ ಈ ಲೋರಾ ಶಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಸಮುದ್ರದಿಂದ ನೆಲಕ್ಕೆ ಮತ್ತು ನೆಲದಿಂದ ನೆಲಕ್ಕೆ ಹಾರಿಸಬಹುದಾದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ವಿಶಿಷ್ಟ ಲಾಂಚರ್, ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಯನ್ನು ಒಳಗೊಂಡಿದೆ.
ಐಎಂಆರ್‌ಎಚ್ ಎಂಜಿನ್ ಉತ್ಪಾದನೆಗಾಗಿ ಕೈಜೋಡಿಸಿದ ಎಚ್‌ಎಎಲ್, ಸ್ಯಾಫ್ರಾನ್
ಭಾರತೀಯ ಬಹೂಪಯೋಗಿ ಹೆಲಿಕಾಪ್ಟರ್ 13–ಟನ್ ಐಎಂಆರ್‌ಎಚ್ ಹಾಗೂ ಅದರ ನೌಕಾ ಮಾದರಿ ಡಿಬಿಎಂಆರ್‌ಎಚ್ ಎಂಜಿನ್‌ಗಳ ತಯಾರಿಕೆಗಾಗಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಕಾರ್ಯಹಂಚಿಕೆ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದವು. ಈ ವಿಷಯವಾಗಿ, ಕಳೆದ ವರ್ಷ ಜುಲೈ 8ರಂದೇ ಎರಡೂ ಕಂಪೆನಿಗಳ ನಡುವೆ ಒಡಂಬಡಿಕೆ ಆಗಿತ್ತು.
ಹಾನಿ ಮುನ್ಸೂಚನೆ ನೀಡುವ ಕೃತಕ ಬುದ್ಧಿಮತ್ತೆ: ವಿಮಾನ ಹಾನಿಗೀಡಾಗುವ ಸಂಭವ ಇರುವ ಮುನ್ಸೂಚನೆ ನೀಡುವ ಕೃತಕ ಬುದ್ಧಿಮತ್ತೆಯನ್ನು ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಒ) ಮುಂದಾಗಿದೆ.
ಹೈದರಾಬಾದ್‌ನ ಸ್ಮಾರ್ಟ್ ಮಷಿನ್ಸ್ ಮತ್ತು ಸ್ಟ್ರಕ್ಚರ್ಸ್ (ಎಸ್‌ಎಂಎಸ್) ಜತೆ ಸೇರಿ ಈ ಕಾರ್ಯವನ್ನು ಡಿಆರ್‌ಡಿಒ ಆರಂಭಿಸಿದೆ. ಭಾರತೀಯ ನೌಕಾಪಡೆಯ ಯುದ್ಧವಿಮಾನಕ್ಕೆ(ಮಿಗ್ 29ಕೆ) ಈ ತಂತ್ರಜ್ಞಾನವನ್ನು ಎಸ್ಎಂಎಸ್
ಅಭಿವೃದ್ಧಿಪಡಿಸಿದೆ.
‘ನೌಕಾಪಡೆಯು ನಮ್ಮ ಈ ಕೃತಕ ಬುದ್ಧಮತ್ತೆ ಮೂಲಕ ವಿಮಾನ ಹಾನಿಗೆ ಒಳಗಾಗುವುದನ್ನು ಅರಿತು ಮುನ್ನೆಚ್ಚರಿಕೆ ವಹಿಸಲು ಅವಕಾಶ ಇದೆ’ ಎಂದು ಎಸ್‌ಎಂಎಸ್ ಸಂಸ್ಥಾಪಕ ಶ್ರೀನಿವಾಸ ಆಲೂರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.