ಉಡುಪಿ: ಮಳೆಗಾಲ ಮುಗಿಯುವವರೆಗೂ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಆಗುಂಬೆ ಘಾಟಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಭಾರಿ ಸರಕು ಸಾಗಣೆ ವಾಹನಗಳು ಓಡಾಡಿದರೆ ಘಾಟಿಯ ಇಕ್ಕೆಲಗಳು ಕುಸಿಯುವ ಸಾಧ್ಯತೆಗಳಿವೆ. ಹಾಗಾಗಿ, 12 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳು ಸಂಚರಿಸುವಂತಿಲ್ಲ. ಅ.15ರವರೆಗೂ ನಿಷೇಧದ ಅವಧಿ ಇರಲಿದೆ ಎಂದು ತಿಳಿಸಿದ್ದಾರೆ.
ಮಳೆಗಾಲ ಮುಗಿಯುವವರೆಗೂ ಭಾರಿ ವಾಹನಗಳು ಉಡುಪಿ–ಬ್ರಹ್ಮಾವರ–ಬಾರ್ಕೂರು–ಶಂಕರನಾರಾಯಾಣ, ಸಿದ್ದಾಪುರ–ಹೊಸಂಗಡಿ–ಹುಲಿಕಲ್ ಘಾಟಿ–ಹೊಸನಗರ–ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬೇಕು. ಉಡುಪಿ–ಕಾರ್ಕಳ–ಬಜಗೋಳಿ–ಎಸ್‌ಕೆ ಬಾರ್ಡರ್–ಕೆರೆಕಟ್ಟೆ–ಶೃಂಗೇರಿ–ಶಿವಮೊಗ್ಗ ಮಾರ್ಗದಲ್ಲೂ ಸಂಚರಿಸಬಹುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.