ADVERTISEMENT

ಕೆಲವರಿಗಷ್ಟೇ ನೀಟ್‌: ಎಐಡಿಎಸ್‌ಒ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:35 IST
Last Updated 22 ನವೆಂಬರ್ 2024, 15:35 IST
ನೀಟ್‌
ನೀಟ್‌   

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳ 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಜೆಇಇ ತರಬೇತಿ ನೀಡುವುದಾಗಿ ಘೋಷಿಸಿದೆ. ಉಳಿದ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತಿದೆ ಎಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್‌ ಆರೋಪಿಸಿದ್ದಾರೆ.

ಸಿಇಟಿ ಬರೆಯುವ ಶೇ 90ರಷ್ಟು ವಿದ್ಯಾರ್ಥಿಗಳನ್ನು ಉಚಿತ ತರಬೇತಿಯಿಂದ ಹೊರಗಿಟ್ಟು, ಶೇ 10ರಷ್ಟು ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲು  ಹೊರಟಿದ್ದಾರೆ. ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡ ಎಲ್ಲರಿಗೂ ತರಬೇತಿ ನೀಡಬೇಕು. 25 ಸಾವಿರಕ್ಕೆ ಸೀಮಿತ ಮಾಡಿದರೆ ಉಳಿದ ವಿದ್ಯಾರ್ಥಿಗಳಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಇದು ಶಿಕ್ಷಣವನ್ನು ಎಲ್ಲರಿಗೂ ಖಾತ್ರಿ ಪಡಿಸಬೇಕೆಂಬ ಸರ್ಕಾರಿ ಕಾಲೇಜಿನ ಮೂಲತತ್ವಕ್ಕೆ ವಿರುದ್ಧವಾಗಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಭಾರಿ ಮೊತ್ತ ನೀಡಿ, ತರಬೇತಿ ಜವಾಬ್ದಾರಿಯನ್ನು ನೀಡಿರುವುದೂ ಅನುಮಾನ ಮೂಡಿಸಿದೆ ಎಂದು ದೂರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT