ADVERTISEMENT

ಏರ್ ಆಂಬುಲೆನ್ಸ್ ಸೇವೆಗೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 18:12 IST
Last Updated 8 ಸೆಪ್ಟೆಂಬರ್ 2020, 18:12 IST
ಬಿ.ಎಸ್.ಯಡಿಯೂರಪ್ಪ ಅವರು ಏರ್ ಆಂಬುಲೆನ್ಸ್  ಸೇವೆಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥನಾರಾಯಣ, ಸಚಿವ ಬಿ.ಶ್ರೀರಾಮುಲು, ಐಕ್ಯಾಟ್ ಸಂಸ್ಥೆಯ ಸಹ ಸಂಸ್ಥಾಪಕಿ ಡಾ.ಶಾಲಿನಿ ನಾಲ್ವಾಡ್ ಇದ್ದರು 
ಬಿ.ಎಸ್.ಯಡಿಯೂರಪ್ಪ ಅವರು ಏರ್ ಆಂಬುಲೆನ್ಸ್  ಸೇವೆಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥನಾರಾಯಣ, ಸಚಿವ ಬಿ.ಶ್ರೀರಾಮುಲು, ಐಕ್ಯಾಟ್ ಸಂಸ್ಥೆಯ ಸಹ ಸಂಸ್ಥಾಪಕಿ ಡಾ.ಶಾಲಿನಿ ನಾಲ್ವಾಡ್ ಇದ್ದರು    

ಯಲಹಂಕ: ಐಕ್ಯಾಟ್ ಸಂಸ್ಥೆಯು ಖ್ಯಾತಿ ಕ್ಲೈಮೇಟ್ ಸಂಸ್ಥೆ ಸಹಯೋಗದಲ್ಲಿ ಆರಂಭಿಸಿರುವ ‘ಇಂಟೆಗ್ರೇಟೆಡ್ ಏರ್ ಆಂಬುಲೆನ್ಸ್’ ತುರ್ತು ವೈದ್ಯಕೀಯ ಸೇವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಕ್ಕೂರು ಏರೋಡ್ರೋಂನಲ್ಲಿ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಯಡಿಯೂರಪ್ಪ, ‘ಭಾರತದಲ್ಲೇ ಇದೊಂದು ಪ್ರಥಮ ಮತ್ತು ವಿಶಿಷ್ಠ ಸೇವೆಯಾಗಿದೆ. ಅನಾರೋಗ್ಯಕ್ಕೆ ಒಳಗಾದವರಿಗೆ ತುರ್ತು ಸಂದರ್ಭದಲ್ಲಿ ಸೇವೆ ನೀಡುವ ಕಾರ್ಯವನ್ನು ಏರ್ ಆಂಬುಲೆನ್ಸ್‌ಗಳು ಮಾಡಲಿವೆ. ರಾಜ್ಯದ ವಿವಿಧ ನಗರಗಳಲ್ಲಿನ ಆಸ್ಪತ್ರೆಗಳಿಗೆ ಸಂಪರ್ಕ ಸಾಧಿಸಿ, ತ್ವರಿತವಾಗಿ ರೋಗಿಗಳನ್ನು ಒಯ್ಯಲು ಈ ಸೇವೆಯು ಸಹಕಾರಿ’ ಎಂದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ‘ಕೊರೊನಾ ಸೋಂಕು ಸಂಕಷ್ಟ ಪರಿಸ್ಥಿತಿಯಲ್ಲಿ ಐಕ್ಯಾಟ್ ಸಂಸ್ಥೆಯು ಇಂತಹ ಅಗತ್ಯ ಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯ ಕಾರ್ಯ’ ಎಂದರು.

ADVERTISEMENT

ಐಕ್ಯಾಟ್ ಸಂಸ್ಥೆಯ ಸಹ ಸಂಸ್ಥಾಪಕಿ ಡಾ.ಶಾಲಿನಿ ನಾಲ್ವಾಡ್ ಅವರು, ’ತುರ್ತು ಸ್ಥಿತಿಗಳಿಗೆ ಅನುಗುಣವಾಗಿ ಸೇವೆಗಳನ್ನು ಪೂರೈಸಲು ಉತ್ತಮ ವೈದ್ಯಕೀಯ ಸೇವೆಗಳ ಅಗತ್ಯವಿದೆ. ಏರ್ ಆಂಬುಲೆನ್ಸ್ ಸೇವೆ ಜನರಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.