ADVERTISEMENT

ಯುವಜನೋತ್ಸವಕ್ಕೆ ತೆರೆ; ಹುಬ್ಬಳ್ಳಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 16:03 IST
Last Updated 18 ಜನವರಿ 2024, 16:03 IST
<div class="paragraphs"><p>ಬೀದರ್‌ನ&nbsp;ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 18ನೇ ಶಕ್ತಿ ಸಂಭ್ರಮ ಹಾಗೂ ಮಹಿಳಾ ಅಂತರ ಕಾಲೇಜುಗಳ ಯುವಜನೋತ್ಸವದಲ್ಲಿ ಪ್ರಶಸ್ತಿ ವಿಜೇತ ತಂಡದ ಸಂಭ್ರಮ</p></div>

ಬೀದರ್‌ನ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 18ನೇ ಶಕ್ತಿ ಸಂಭ್ರಮ ಹಾಗೂ ಮಹಿಳಾ ಅಂತರ ಕಾಲೇಜುಗಳ ಯುವಜನೋತ್ಸವದಲ್ಲಿ ಪ್ರಶಸ್ತಿ ವಿಜೇತ ತಂಡದ ಸಂಭ್ರಮ

   

ಬೀದರ್‌: ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬೀದರ್‌ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 18ನೇ ಶಕ್ತಿ ಸಂಭ್ರಮ ಹಾಗೂ ಮಹಿಳಾ ಅಂತರ ಕಾಲೇಜುಗಳ ಯುವಜನೋತ್ಸವಕ್ಕೆ ಗುರುವಾರ ವಿದ್ಯುಕ್ತ ತೆರೆ ಬಿತ್ತು.

ನಾಟಕ, ನೃತ್ಯರೂಪಕ, ಮಿಮಿಕ್ರಿ, ರಂಗೋಲಿ ಸ್ಪರ್ಧೆ, ಜನಪದ ಗೀತ ಗಾಯನ, ಜನಪದ ಆರ್ಕೆಸ್ಟ್ರಾ, ರಸಪ್ರಶ್ನೆ, ಪೇಟಿಂಗ್‌, ಏಕವ್ಯಕ್ತಿ ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂರೂ ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಸಿಬ್ಬಂದಿ ಪಾಲ್ಗೊಂಡಿದ್ದರು. ಎಲ್ಲ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ ಹುಬ್ಬಳ್ಳಿ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳೆಯರ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ವಿಜಯಪುರದ ಕೆಎಸ್‌ಎಡಬ್ಲ್ಯೂಯುವಿ ಜ್ಞಾನಶಕ್ತಿ ಕಾಲೇಜು ರನ್ನರ್‌ ಅಪ್‌ಗೆ ತೃಪ್ತಿ ಪಟ್ಟಿತು.

ADVERTISEMENT

ಸಂಗೀತ ವಿಭಾಗದಲ್ಲೂ ಹುಬ್ಬಳ್ಳಿ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳೆಯರ ಕಾಲೇಜು ಮೊದಲ ಬಹುಮಾನ ಗಳಿಸಿದರೆ, ವಿಜಯಪುರದ ಕೆಎಸ್‌ಎಡಬ್ಲ್ಯೂಯುವಿ ಜ್ಞಾನಶಕ್ತಿ ಕಾಲೇಜು ದ್ವಿತೀಯ ಬಹುಮಾನ ಜಯಿಸಿತು. ನೃತ್ಯ ಸ್ಪರ್ಧೆಯಲ್ಲಿ ಕಲಬುರಗಿಯ ಶ್ರೀಮತಿ ವೀರಮ್ಮ ಗಂಗಾಸಿರಿ ಕಾಲೇಜು ಪ್ರಥಮ, ಕಲಬುರಗಿ ಶರಣಬಸವೇಶ್ವರ ರೇಶ್ಮಿ ಮಹಿಳಾ ಪದವಿ ಕಾಲೇಜು ತಂಡ ದ್ವಿತೀಯ ಬಹುಮಾನ ಪಡೆಯಿತು. ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳೆಯರ ಕಾಲೇಜು ಪ್ರಥಮ, ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ದ್ವಿತೀಯ ಬಹುಮಾನ ಗಳಿಸಿತು.

ನಾಟಕ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳೆಯರ ಕಾಲೇಜು ಪ್ರಥಮ, ಕಲಬುರಗಿಯ ಶರಣಬಸವೇಶ್ವರ ರೇಶ್ಮಿ ಮಹಿಳಾ ಪದವಿ ಕಾಲೇಜು ತಂಡ ದ್ವಿತೀಯ ಬಹುಮಾನ ಪಡೆಯಿತು. ಫೈನ್‌ ಆರ್ಟ್ಸ್‌ನಲ್ಲಿ ಕಲಬುರಗಿಯ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜು ಪ್ರಥಮ, ಸೇಡಂನ ಶ್ರೀಮತಿ ನರ್ಮದಾ ದೇವಿ ಗಿಲಾದ ಮಹಿಳೆಯರ ಪದವಿ ಕಾಲೇಜು ದ್ವಿತೀಯ ಸ್ಥಾನ ಗಳಿಸಿತು.

ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಂಶುಪಾಲ ಪ್ರೊ. ಮನೋಜಕುಮಾರ, ಪ್ರೊ. ವಿಷ್ಣು ಎಂ. ಶಿಂಧೆ, ಪ್ರೊ. ವಿದ್ಯಾ ಪಾಟೀಲ, ಪ್ರೊ.ಡಿ.ಎಂ. ಮದರಿ, ಪ್ರೊ.ಡಿ.ಬಿ.ಕಂಬಾರ, ಶಂಕರಗೌಡ ಎಸ್‌. ಸೋಮನಾಳ, ಎಚ್‌.ಎಂ. ಚಂದ್ರಶೇಖರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.