ಬಹುನಿರೀಕ್ಷಿತ ಬೆಂಗಳೂರು–ಮೈಸೂರು ಹೆದ್ದಾರಿ ಹತ್ತು ಪಥ ಕಾಮಗಾರಿಯು ಅಂತಿಮ ಘಟ್ಟ ತಲುಪಿದ್ದು, ಈ ಬಾರಿಯ ದಸರಾದಲ್ಲಿ ಪ್ರಯಾಣಿಕರು ಹೆಚ್ಚಿನ ಟ್ರಾಫಿಕ್ ಕಿರಿಕಿರಿ ಇಲ್ಲದೇ ಮೈಸೂರು ತಲುಪಬಹುದಾಗಿದೆ.
ಹತ್ತು ಪಥದಲ್ಲಿ ಆರು ಪಥಗಳು ‘ಎಕ್ಸ್‌ಪ್ರೆಸ್ ವೇ’ಗೆ ಮೀಸಲು. ಇದರಲ್ಲಿ ಬೆಂಗಳೂರು–ಮೈಸೂರು ಕಡೆಗೆ ತಲಾ ಮೂರು ಪಥಗಳು ಮೀಸಲಿವೆ. ಇದರ ಎಡಬಲದಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ಸಹ ನಿರ್ಮಾಣ ಆಗುತ್ತಿದೆ.
ಹಳೇ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಬೇಕಾದರೆ ಕನಿಷ್ಠ 3–4 ಗಂಟೆ ಬೇಕಿತ್ತು. ಹೊಸ ಹೆದ್ದಾರಿಯಿಂದ ಟ್ರಾಫಿಕ್ ಕಿರಿಕಿರಿ ತಪ್ಪಲಿದ್ದು, ಬೈಪಾಸ್‌ಗಳಿಂದಾಗಿ ಸದ್ಯ ಈ ನಗರಗಳ ನಡುವಿನ ಪ್ರಯಾಣದ ಅವಧಿ ಈಗಾಗಲೇ ಸಾಕಷ್ಟು ಕಡಿಮೆ ಆಗಿದೆ. ಅಂತಿಮವಾಗಿ ಪ್ರಯಾಣದ ಒಟ್ಟು ಅವಧಿ ಸರಾಸರಿ 90 ನಿಮಿಷಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.