ಮೈಸೂರು: ‘ಡಾ.ಬಿ.ಆರ್.ಅಂಬೇಡ್ಕರ್ ಬಯಸಿದ ಸ್ವತಂತ್ರ ಭಾರತ ನಿರ್ಮಾಣಕ್ಕೆ ಯುವಪೀಳಿಗೆ ಮುಂದಾಗಬೇಕು. ಸಮಾಜದಲ್ಲಿ ಬದಲಾವಣೆ ತರಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಶಯ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಿಂದ ಶುಕ್ರವಾರ ನಡೆದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡಿಗೆ... ಪ್ರಬುದ್ಧ ಭಾರತದ ಕಡೆಗೆ’ ವಿಚಾರಸಂಕಿರಣದಲ್ಲಿ ‘ಅಂಬೇಡ್ಕರ್ ಬಯಸಿದ ಸ್ವತಂತ್ರ ಭಾರತ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
‘ಸದ್ಯ, ಮೌಲ್ಯಗಳು ಕುಸಿಯುತ್ತಿವೆ. ಮನುಷ್ಯನಿಗೆ ತೃಪ್ತಿ ಇರಬೇಕೇ ಹೊರಬೇಕೇ ಹೊರತು ದುರಾಸೆ ಇರಬಾರದು. ದುರಾಸೆ ವಾಸಿಯಾಗದ ಕಾಯಿಲೆ. ಇದಕ್ಕೆ ಅಂಬೇಡ್ಕರ್ ಬಯಸಿದ ಸಮಾನತೆಯ ಸಮಾಜದಲ್ಲಿ ಪರಿಹಾರವಿದೆ’ ಎಂದರು.
‘ಭ್ರಷ್ಟಾಚಾರವು ಕ್ಯಾನ್ಸರ್‌ನಂತೆ ಕಾಡುತ್ತಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ಆಸ್ತಿ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗುತ್ತಿದೆ. ಗ್ರಾಮೀಣ ಪ್ರದೇಶ ಹಿಂದುಳಿಯುತ್ತಿದೆ’ ಎಂದು ವಿಷಾದಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಿದರೆ ದೇಶ ಸದೃಢವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.