ADVERTISEMENT

ಬೆಳಗಾವಿ: ಬಸ್ ನಿಲ್ದಾಣ ಕಾಮಗಾರಿ ವೇಳೆ ಪುರಾತನ ಕಾಲದ ಶಿಲಾಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 5:26 IST
Last Updated 20 ಮೇ 2020, 5:26 IST
ಬೆಳಗಾವಿಯಲ್ಲಿ ಸಿಕ್ಕ ಪುರಾತನ ಕಾಲದ ಶಿಲಾಶಾಸನ
ಬೆಳಗಾವಿಯಲ್ಲಿ ಸಿಕ್ಕ ಪುರಾತನ ಕಾಲದ ಶಿಲಾಶಾಸನ   
""
""

ಬೆಳಗಾವಿ: ಇಲ್ಲಿನ ನಗರದ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿ ವೇಳೆ ನೆಲ ಅಗೆಯುವಾಗ ಪುರಾತನ ಕಾಲದ ಶಿಲಾಶಾಸನವೊಂದು ಪತ್ತೆಯಾಗಿದೆ.

ಇದು ಸುಮಾರು 4 ಅಡಿ ಉದ್ದವಿದೆ. ಸುಮಾರು 25 ಅಡಿ ಆಳದಲ್ಲಿದ್ದ ಅದನ್ನು ಧಕ್ಕೆಯಾಗದಂತೆ ಹೊರ ತೆಗೆಯಲಾಗಿದೆ. ಬಲಭಾಗದಲ್ಲಿ ಶಿವಲಿಂಗ ಹಾಗೂ ಎಡ ಭಾಗದಲ್ಲಿ ಬಸವಣ್ಣನ ಚಿತ್ರವಿದೆ. ಅದರ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರನ ಚಿತ್ರವನ್ನು ಕೆತ್ತನೆ ಮಾಡಲಾಗಿದೆ. ಹಳೆಗನ್ನಡದಲ್ಲಿ ಕೆಲವು ಸಾಲುಗಳನ್ನು ಬರೆಯಲಾಗಿದೆ.

ಶಾಸನವನ್ನು ಸಂರಕ್ಷಿಸಲಾಗಿದೆ. ಅದನ್ನು ಸಂಬಂಧಿಸಿದ ಇಲಾಖೆಗೆ ನೀಡಲಾಗುವುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದರು.

ADVERTISEMENT

ಕೆಲವು ತಿಂಗಳುಗಳ ಹಿಂದೆಯೂ ಇಲ್ಲಿ ಶಾಸನವೊಂದು ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.