ADVERTISEMENT

ಜಲಸಂಪನ್ಮೂಲ: ಅನಿಲ್‌ ಕುಮಾರ್‌ ಸಲಹೆಗಾರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 23:04 IST
Last Updated 3 ಜೂನ್ 2021, 23:04 IST

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ಮೇ 31ರಂದು ನಿವೃತ್ತರಾಗಿರುವ ಅನಿಲ್‌ ಕುಮಾರ್‌ ಅವರನ್ನು ಅಂತರ ರಾಜ್ಯ ಜಲ ವಿವಾದಗಳ ಪ್ರಧಾನ ಸಲಹೆಗಾರರು ಹಾಗೂ ಕೃಷ್ಣಾ, ಮಹದಾಯಿ ಜಲ ವಿವಾದ ತಾಂತ್ರಿಕ ಸಮಿತಿ ಮತ್ತು ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ.

ಡಿ.ಎನ್‌. ದೇಸಾಯಿ ಅವರ ನಿಧನದ ಬಳಿಕ ಈ ಮೂರೂ ಹುದ್ದೆಗಳ ಕಾರ್ಯಭಾರವನ್ನು ಅನಿಲ್‌ ಕುಮಾರ್‌ ಅವರಿಗೆ ನೀಡಲಾಗಿತ್ತು. ವಯೋ ನಿವೃತ್ತಿಯ ಬಳಿಕ ಈ ಹುದ್ದೆಗಳಿಗೆ ಅವರನ್ನು ನೇಮಕ ಮಾಡಿ ಜಲ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.

ಕೃಷ್ಣಾ ಕಣಿವೆಯ ಸಮಗ್ರ ನೀರಾವರಿ ಯೋಜನೆ ರೂಪಿಸುವುದು, ಕೃಷ್ಣಾ ಮತ್ತು ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಲಹೆ, ಶಿಫಾರಸುಗಳನ್ನು ನೀಡುವುದು, ಕೃಷ್ಣಾ– ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿ ಹಾಗೂ ನೀರಾವರಿ ತಾಂತ್ರಿಕ ಸಲಹಾ ಸಮಿತಿಗಳಿಗೆ ವಹಿಸಿರುವ ಕೆಲಸಗಳನ್ನು ಅನಿಲ್‌ ಕುಮಾರ್‌ ನಿರ್ವಹಿಸಬೇಕಿದೆ. ಜಲ ಸಂಪನ್ಮೂಲ ಇಲಾಖೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆ ನೀಡುವ ಕೆಲಸವನ್ನೂ ಮಾಡಬೇಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.