ಮೈಸೂರು: ‘ದಾಸ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಕನಕದಾಸ ಎಂದು ಕರೆಯುವ ಮೂಲಕ ಕನಕರನ್ನು ನಾವ್ಯಾಕೆ ಕುಬ್ಜಗೊ ಳಿಸಬೇಕು. ಕನಕರು ಹರಿದಾಸರಷ್ಟೇ ಅಲ್ಲ; ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಭಾಗವತವನ್ನು ತಿಳಿದಿದ್ದವರು’ ಎಂದು ಚಿಂತಕ ಪ್ರೊ.ಅರವಿಂದ ಮಾಲಗತ್ತಿ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.
ಕನಕದಾಸರ 533ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಕನಕರು ಕೀರ್ತನೆಯನ್ನಷ್ಟೇ ರಚಿಸಿಲ್ಲ; ವಿದ್ವತ್ ಕಾವ್ಯವನ್ನು ಬರೆದಿದ್ದಾರೆ. ಒಂದೇ ದೈವ ಎನ್ನುವ ಬದಲು ಹಲವು ದೈವದ ಅಸ್ತಿತ್ವ ಪ್ರತಿಪಾದಿಸಿದ್ದಾರೆ. ಆದ್ದರಿಂದ ಕನಕದಾಸ ಎನ್ನುವ ಬದಲು ಕನಕ ವ್ಯಾಸ, ಕನಕರು ಎಂದರೆಸಾಕು’ ಎಂದು ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.