ADVERTISEMENT

ವಾಸ್ತುಶಿಲ್ಪಶಾಸ್ತ್ರ ಪ್ರವೇಶ: ಅರ್ಹತಾ ಅಂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 23:51 IST
Last Updated 11 ಜುಲೈ 2024, 23:51 IST
   

ಬೆಂಗಳೂರು: ವಾಸ್ತುಶಿಲ್ಪಶಾಸ್ತ್ರ ಕೋರ್ಸ್‌ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಇನ್ನು ಮುಂದೆ ದ್ವಿತೀಯ ಪಿಯುಸಿಯಲ್ಲಿ ಶೇ 45 ಅಂಕ ಪಡೆದರೂ ಸಾಕು.

ಅರ್ಹತಾ ಅಂಕಗಳನ್ನು ಶೇ 50ರಿಂದ 45ಕ್ಕೆ ಇಳಿಸಿ ವಾಸ್ತುಶಿಲ್ಪಶಾಸ್ತ್ರ ಪರಿಷತ್ತು ಆದೇಶ ಹೊರಡಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜುಲೈ 13ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ. 

‘ಅರ್ಹತಾ ಅಂಕ ಕಡಿಮೆ ಮಾಡಿರುವ ಕುರಿತು ವಾಸ್ತುಶಿಲ್ಪಶಾಸ್ತ್ರ ಪರಿಷತ್ತು ಪತ್ರ ಬರೆದಿದ್ದು ನಾಟಾ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜುಲೈ 15ರೊಳಗೆ ನಾಟಾ ಅಂಕಗಳ ವಿವರವನ್ನು ಕೆಇಎಗೆ ಸಲ್ಲಿಸಬೇಕು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ADVERTISEMENT

ಅಣಕು ಫಲಿತಾಂಶ ಪ್ರಕಟ:

ಎರಡನೇ ವರ್ಷದ ಎಂಜಿನಿಯರಿಂಗ್‌ ಕೋರ್ಸುಗಳ ಪ್ರವೇಶಕ್ಕಾಗಿ ಡಿಪ್ಲೊಮಾ ಅಭ್ಯರ್ಥಿಗಳು ದಾಖಲಿಸಿರುವ ಆಯ್ಕೆಗಳ ಆಧಾರದ ಮೇಲೆ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.