ADVERTISEMENT

ರಾಜ್ಯ ಪಠ್ಯಕ್ರಮದ ಭಾಗವಾಗಲಿದೆ ಕಲೆ, ಸಂಸ್ಕೃತಿ: ಶಿಕ್ಷಣ ಇಲಾಖೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 15:45 IST
Last Updated 18 ಡಿಸೆಂಬರ್ 2023, 15:45 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ರಾಜ್ಯದ ವಿವಿಧ ಭಾಗಗಳ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಚಿತ್ರಕಲೆ, ರಂಗಭೂಮಿ, ಸಂಗೀತ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಸಂಸ್ಕೃತಿ, ಕಲೆಗಳನ್ನು ಒಳಗೊಂಡ ಸಮಗ್ರ ಪಠ್ಯವನ್ನು ಶಾಲಾ ಶಿಕ್ಷಣ ನೀತಿಯ ಭಾಗವಾಗಿಸುವಂತೆ ಆಯೋಗಕ್ಕೂ ಸಲಹೆ ನೀಡಲಾಗಿದ್ದು, 2024-25ನೇ ಶೈಕ್ಷಣಿಕ ಸಾಲಿನಿಂದಲೇ ಅಳವಡಿಸಲಾಗುತ್ತಿದೆ.

‘ಕಲೆ ಮತ್ತು ಸಂಸ್ಕೃತಿ ಪಠ್ಯದ ಮುಖ್ಯ ಭಾಗವಾಗಬೇಕು. ಕರಕುಶಲತೆಯು ಕಾಗದ ಕತ್ತರಿಸುವುದು, ಕೆಲ ಕಲಾಕೃತಿಗಳನ್ನು ರಚಿಸುವುದಕಷ್ಟೇ ಸೀಮಿತವಾಗಬಾರದು. ಕಲೆಯ ಹಲವು ರೂಪಗಳನ್ನು ಹಂತಹಂತವಾಗಿ ಮಕ್ಕಳಿಗೆ ಕಲಿಸಬೇಕು. ಮಲೆನಾಡಿನ ಸಂಸ್ಕೃತಿಯನ್ನು ಬಯಲುಸೀಮೆ, ಕರಾವಳಿ ವಿದ್ಯಾರ್ಥಿಗಳು, ಬಯಲು ಸೀಮೆಯ ಕಲೆ, ಸಂಸ್ಕೃತಿಯನ್ನು ಇತರೆ ಭಾಗಗಳ ವಿದ್ಯಾರ್ಥಿಗಳು ಕಲಿಯಬೇಕು. ಆಹಾರ ಸಂಸ್ಕೃತಿಯ ಪರಿಚಯವಾಗಬೇಕು. ಅದಕ್ಕಾಗಿ ಎಸ್‌ಇಪಿಯಲ್ಲಿ ಅಳವಡಿಸಲಾಗುತ್ತಿದೆ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ADVERTISEMENT

ಪ್ರಸ್ತುತ ಶಾಲೆಗಳಲ್ಲಿ ಕಲೆ ಮತ್ತು ಕರಕುಶಲ ವಿಷಯ ಬೋಧಿಸಲಾಗುತ್ತಿದ್ದರೂ, ಸಮಗ್ರವಾಗಿಲ್ಲ. ಹೊಸ ಪಠ್ಯಕ್ರಮ ಪ್ರಾಯೋಗಿಕ ಮತ್ತು ಥಿಯರಿ ಎರಡನ್ನೂ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.