ADVERTISEMENT

ದಲಿತರ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ: ಅಶ್ವಿನಿ

ಯುಎನ್‌ಎಚ್‌ಆರ್‌ಸಿ ವಿಷಯ ತಜ್ಞೆ ಡಾ.ಕೆ.ಪಿ. ಅಶ್ವಿನಿ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:38 IST
Last Updated 21 ಅಕ್ಟೋಬರ್ 2022, 20:38 IST
ಡಾ.ಕೆ.ಪಿ.ಅಶ್ವಿನಿ
ಡಾ.ಕೆ.ಪಿ.ಅಶ್ವಿನಿ   

ಕೋಲಾರ: ‘ನನ್ನ ಯಶಸ್ಸಿಗೆ ಅಂಬೇಡ್ಕರ್ ಅವರ ಆಶಯ ಮತ್ತು ಆದರ್ಶಗಳೇ ಕಾರಣ. ಆ ನಿಟ್ಟಿನಲ್ಲಿ ಅವರ ಆದರ್ಶ ಹಾಗೂ ಸಂವಿಧಾನದ ಉದ್ದೇಶವನ್ನು ಜಾರಿ ಮಾಡಲು ಜಾಗತಿಕ ವೇದಿಕೆಯಲ್ಲಿ ಚರ್ಚಿಸುತ್ತೇನೆ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ವಿಷಯ ತಜ್ಞೆಯಾಗಿ ಆಯ್ಕೆಯಾಗಿರುವ ಡಾ.ಕೆ.ಪಿ. ಅಶ್ವಿನಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಶ್ರೀರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ದಲಿತ ಸಮುದಾಯದ ನನಗೆ, ಶ್ರಮದ ಫಲವಾಗಿ ಈ ಸ್ಥಾನ ಸಿಕ್ಕಿದೆ. ಸಮುದಾಯದ ಧ್ವನಿಯಾಗಿ ದೇಶದ ಬೆಳವಣಿಗೆಗೆ ಶ್ರಮಿಸುತ್ತೇನೆ’ ಎಂದರು.

ADVERTISEMENT

‘ದಲಿತರ ಕಷ್ಟ, ಸುಖ ಅರಿತಿದ್ದೇನೆ. ದೇಶದ ಬುಡಕಟ್ಟು ಜನಾಂಗದ ಪರಿಸ್ಥಿತಿ ಬಗ್ಗೆ, ಜನಾಂಗೀಯ ಭೇದ, ವರ್ಣಭೇದ ನೀತಿ ಬಗ್ಗೆ ಮಾಹಿತಿ ಸಂಗ್ರಹಿಸಿ ಬದಲಾವಣೆಗೆ ಪ್ರಯತ್ನಿಸಿದ್ದು, ಇದಕ್ಕೆ ಕುಟುಂಬ ಹಾಗೂ ಸಮುದಾಯದ ಸಹಕಾರ ಪ್ರಮುಖವಾಗಿದೆ. ಮಂಡಳಿಯು ಇದನ್ನು ಗುರುತಿಸಿ ಗೌರವಿಸಿ ಉನ್ನತ ಸ್ಥಾನ ನೀಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.