ಬೆಂಗಳೂರು: ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿರುವ ಖಗೋಳ ವಿದ್ಯಮಾನವನ್ನು ವಿಶ್ವದಾದ್ಯಂತ ಆಸಕ್ತರು ಸೋಮವಾರ ಸಂಜೆ ವೀಕ್ಷಿಸಿದ್ದಾರೆ. 400 ವರ್ಷಗಳ ನಂತರ ಘಟಿಸಿರುವ ಈ ವಿದ್ಯಮಾನವನ್ನು ಮಂಗಳವಾರವೂ ನೋಡಬಹುದಾಗಿದೆ.
ಸೋಮವಾರ ಸಂಜೆ ಈ ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿದ್ದವು. ಮಂಗಳವಾರವೂ ಇದು ಗೋಚರಿಸಲಿದೆ. ಸಂಜೆ 6.30ರಿಂದ 7.30ರ ಮಧ್ಯೆ ಇದನ್ನು ವೀಕ್ಷಿಸಬಹುದು. ಆದರೆ ಎರಡೂ ಗ್ರಹಗಳು ಪರಸ್ಪರ ಸ್ವಲ್ಪ ದೂರ ಸರಿದಿರಲಿವೆ. ಈ ಎರಡೂ ಗ್ರಹಗಳ ಹೊಳಪು ಪ್ರಬಲವಾಗಿರುವ ಕಾರಣ ಬರಿಗಣ್ಣಿನಿಂದಲೇ ಅವನ್ನು ವೀಕ್ಷಿಸಬಹುದು ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.
1,623ರಲ್ಲಿ ಇಂತಹ ವಿದ್ಯಮಾನ ಘಟಿಸಿತ್ತು. ಮುಂದಿನ 60 ವರ್ಷಗಳ ನಂತರ 2080ರಲ್ಲಿ ಮತ್ತೆ ಸಂಭವಿಸಲಿದೆ ಎಂದು ನಾಸಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.