ಅಥಣಿ: ಬೆಳಗಾವಿಯ ಅಥಣಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್‌ಕುಮಠಳ್ಳಿ ಭರ್ಜರಿ ಜಯ ದಾಖಲಿಸಿದ್ದಾರೆ.
ಆರಂಭಿಕ ಹಂತದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದಮಹೇಶ್ ಕುಮಠಳ್ಳಿ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಈ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ ಅವರುಮಹೇಶ್ ಕುಮಠಳ್ಳಿವಿರುದ್ಧ ಸೋಲು ಕಂಡಿದ್ದರು.
ಮಹೇಶ್ ಕುಮಠಳ್ಳಿಅವರು ತಮ್ಮ ಸಮೀಪದ ಪ್ರತಿಸ್ಫರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಜಾನನಮಂಗಸೂಳಿ ವಿರುದ್ಧ41ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
16 ಸುತ್ತು ಮುಕ್ತಾಯಗೊಂಡಾಗಬಿಜೆಪಿ ಅಭ್ಯರ್ಥಿ 84699 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ51021 ಮತಗಳನ್ನು ಪಡೆದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿಮಹೇಶ ಕುಮಠಳ್ಳಿ ಅವರು33678 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.ಗಜಾನನ ಮಂಗಸೂಳಿ ಸೋಲಿನ ಭೀತಿಯಲ್ಲಿದ್ದರು.
ಅಂತಿಮವಾಗಿಮಹೇಶ್ ಕುಮಠಳ್ಳಿ ಅವರು 90791 ಮತಗಳನ್ನು ಪಡೆದರೆ,ಕಾಂಗ್ರೆಸ್‌ನ ಮಂಗಸೂಳಿ 51394 ಮತಗಳನ್ನು ಪಡೆದು ಸೋಲು ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.