ADVERTISEMENT

ಮೊದಲು ಮತದಾನ ಮಾಡಿದವರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 15:17 IST
Last Updated 5 ಡಿಸೆಂಬರ್ 2019, 15:17 IST
ಪೂಜಾ ಕೋರಿ
ಪೂಜಾ ಕೋರಿ   

ಅಥಣಿ ಕ್ಷೇತ್ರದಲ್ಲಿ ಮೊದಲ ಮತ ಚಲಾಯಿಸಿದವರು ತಮ್ಮ ಖುಷಿ ಹಂಚಿಕೊಂಡ ಬಗೆಯಿದು.

ಪ್ರತಿ ಮತವೂ ಅಮೂಲ್ಯ

ಮತದಾನ ಮಾಡುವುದು ಅರ್ಹರಾದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜನರಿಗಾಗಿ ಇರುವ ಸರ್ಕಾರದ ರಚನೆಗಾಗಿ ಪ್ರತಿ ಮತವೂ ಅಮೂಲ್ಯವಾಗಿದೆ. ಅದನ್ನು ತಪ್ಪದೇ ಚಲಾಯಿಸಬೇಕು.

ADVERTISEMENT

– ಪೂಜಾ ಕೋರಿ, ಅಥಣಿ

ಖುಷಿಯಾಯಿತು

ಮೊದಲ ಬಾರಿಗೆ ಮತದಾನ ಮಾಡಿದ್ದು ಖುಷಿ ತಂದಿದೆ. ಸಮಾಜದ ಅಭಿವೃದ್ಧಿಗಾಗಿ ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ.

– ಸಚಿನ ಬಸರಿಖೋಡಿ, ಅಥಣಿ

ಪರಿಹಾರ ಕೊಡಿಸಲಿ

ಕೃಷ್ಣಾ ನದಿ ನೆರೆಯಿಂದ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕಾಮಗಾರಿಗಳಿಗೆ ಬೇಕಾಗಿರುವ ಅನುದಾನ ಬಂದಿಲ್ಲ. ಈ ನಡುವೆಯೂ, ಅಮೂಲ್ಯವಾದ ಮತವನ್ನು ಚಲಾಯಿಸಿದ್ದೇನೆ. ಆಯ್ಕೆಯಾದವರು ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಲಿ.

– ಲಕ್ಷ್ಮಿ ನಾಂದಣೀಕರ, ಅಥಣಿ

ಭವ್ಯ ಭಾರತಕ್ಕಾಗಿ

ಪಕ್ಷಾಂತರದ ಪರ್ವವಿದು. ಯಾವುದೇ ಆಮಿಷಕ್ಕೆ ಬಲಿಯಾಗದೇ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಭವ್ಯ ಭಾರತಕ್ಕಾಗಿ ಮತ ಹಾಕಿದ್ದೇನೆ.

– ಮಂದಾಕಿನ ಕಟಾವಿ, ಅಥಣಿ

ಅಭಿವೃದ್ಧಿಗಾಗಿ...

ನಾನು ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಕ್ಕೆ ಖುಷಿಯಾಗಿದೆ. ಪ್ರವಾಹದಿಂದ ತತ್ತರಿಸಿದವರಿಗೆ ಅನುಕೂಲವಾಗಲಿ, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಮತ ಹಾಕಿದ್ದೇನೆ.

– ಮಯೂರಿ ಪಾಟೀಲ, ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.