ಬೆಂಗಳೂರು: ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಎರಚಿದ್ದ ಆರೋಪದಡಿ ಭಾರತ್ ರಕ್ಷಣಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಟಿಕಾಯತ್ ಮೇಲೆ ಹಲ್ಲೆ ಮಾಡಿದ ನಂತರ ಭರತ್ ಹಾಗೂ ಇತರರು 'ಜೈ ಮೋದಿ' ಘೋಷಣೆ ಕೂಗಿದ್ದರು. ಮೋದಿ ಭಾವಚಿತ್ರ ಸಹ ಪ್ರದರ್ಶಿಸಿದ್ದರು. ಇಬ್ಬರು ಮಹಿಳೆಯರು ಸಹ ಆರೋಪಿಗಳ ಜೊತೆಗಿದ್ದರು. ಘಟನೆ ಬಳಿಕ ಮೂವರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ರಾಕೇಶ್ ಟಿಕಾಯತ್ ಅವರ ಕೈಗೆ ಗಾಯವಾಗಿದೆ. ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.
ಹಲ್ಲೆ ಬಗ್ಗೆ ಮಾತನಾಡಿದ ರಾಕೇಶ್, 'ಮೈಕ್ ತೆಗೆದುಕೊಂಡು ಹೊಡೆದಾಗ ಕೈ ಅಡ್ಡ ಮಾಡಿದೆ. ಇಲ್ಲದಿದ್ದರೆ, ಕತ್ತಿಗೆ ಮೈಕ್ ಬಡಿಯುತ್ತಿತ್ತು. ಮುಂದೆ ಏನಾಗುತ್ತಿತ್ತು ಎಂಬುದು ಗೊತ್ತಿಲ್ಲ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.