ಹೊಸಪೇಟೆ: ‘ವಿಶ್ವಾಸಮತಯಾಚನೆ ಮೇಲೆ ಸೋಮವಾರ ನಡೆಯಲಿರುವ ವಿಧಾನಸಭೆ ಅಧಿವೇಶನದ ಚರ್ಚೆಗೆ ಹಾಜರಾಗುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಿ’ ಎಂದು ಆನಂದ್ ಸಿಂಗ್ ಪ್ರತಿಕ್ರಿಯಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಈಗ ನಾನೇನೂ ಹೇಳಲಾರೆ. ನಾಳೆ ಕಾದು ನೋಡಿ ಎಂದಷ್ಟೇ’ ಹೇಳಿದರು.
‘ನಾನು ಕಾಣೆಯಾಗಿಲ್ಲ. ಅನಾರೋಗ್ಯದ ನಿಮಿತ್ತ ನನ್ನ ತಂದೆ ಪೃಥ್ವಿರಾಜ್ ಸಿಂಗ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರೊಂದಿಗೆ ಅಲ್ಲಿಯೇ ಇದ್ದೆ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನಾನು ಕಾಣೆಯಾಗಿದ್ದೇನೆ ಎಂದು ಕೆಲವರು ಠಾಣೆಗೆ ದೂರು ಕೊಟ್ಟಿದ್ದರು. ಆ ಠಾಣೆಗೆ ಭಾನುವಾರ ರಾತ್ರಿ ನಾನೇ ಖುದ್ದಾಗಿ ಹೋಗಿ ದಾಖಲೆಗಳನ್ನು ಕೊಟ್ಟಿರುವೆ’ ಎಂದು ಸಮಜಾಯಿಷಿ ನೀಡಿದರು.
‘ವ್ಯಾಸರಾಯರ ವೃಂದಾವನ ಹಾಳು ಮಾಡಿರುವ ದುಷ್ಕೃತ್ಯ ಖಂಡನಾರ್ಹವಾದುದು. ವಿಷಯ ತಿಳಿದು ಮನಸ್ಸಿಗೆ ಬಹಳ ನೋವಾಯಿತು. ಪವಿತ್ರ ಸ್ಥಳವನ್ನು ಈ ರೀತಿ ಹಾಳುಗೆಡವಿರುವುದು ಸರಿಯಲ್ಲ. ಕೃತ್ಯ ಎಸಗಿದವರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷಿಸಬೇಕು. ವೃಂದಾವನಕ್ಕೆ ಭೇಟಿ ನೀಡಿ ಅಲ್ಲಿನ ಯತಿಗಳನ್ನು ಭೇಟಿ ಮಾಡಿ ಬಂದಿರುವೆ’ ಎಂದು ತಿಳಿಸಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.