ಬೆಂಗಳೂರು: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯಕ್ಕೆ ಒಳಪಡುವ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಶೇ 15ರಷ್ಟು ಅಖಿಲ ಭಾರತ ಕೋಟಾ ನಿಗದಿಪಡಿಸಲಾಗಿದೆ.
ದೇಶದಲ್ಲಿ ಇಂತಹ 115 ಕಾಲೇಜುಗಳಿದ್ದು, ರಾಜ್ಯದಲ್ಲಿ 28 ಕಾಲೇಜುಗಳಿವೆ. ಈ ಆದೇಶದಂತೆ ಖಾಸಗಿ ಕಾಲೇಜುಗಳಲ್ಲಿ ಸಹ ಶೇ 15ರಷ್ಟು ಸೀಟುಗಳು ಸರ್ಕಾರಿ ಸೀಟುಗಳೇ ಆಗಿದ್ದು, ದೇಶದ ಯಾವುದೇ ಭಾಗದ ಅಭ್ಯರ್ಥಿಗಳು ಯಾವುದೇ ಭಾಗದ ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದೆ. ಉಳಿದ ಶೇ 85ರಷ್ಟು ಸೀಟುಗಳ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಪ್ರಕಟವಾಗಿಲ್ಲ.
ನೀಟ್ ರ‍್ಯಾಂಕಿಂಗ್ ಆಧಾರದಲ್ಲಿ ಬಿಡುಗಡೆಯಾಗುವ ಸೀಟ್ ಮ್ಯಾಟ್ರಿಕ್ಸ್‌ನಂತೆ ಸೀಟುಗಳ ಆಯ್ಕೆ ನಡೆಯಲಿದ್ದು, ಆಯುಷ್ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಶುಕ್ರವಾರ ಸಂಜೆಯೊಳಗೆಪ್ರತ್ಯೇಕ ನೋಂದಣಿ ಮಾಡಬೇಕು. ಜೂನ್ 25ರಿಂದ ಜುಲೈ 4ರ ವರೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್, ಜುಲೈ 24ರಿಂದ 31ರ ವರೆಗೆ 2ನೇ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ ಎಂದು ಆಯುಷ್ ಇಲಾಖೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.