ADVERTISEMENT

‘ಆಯುರ್ವೇದ’ಕ್ಕೆ ‘ನೀಟ್‌’ ಕಡ್ಡಾಯ

ನಿಗದಿಪಡಿಸಿದ ಮಾನದಂಡ ಪೂರೈಸಲೇಬೇಕು: ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 22:28 IST
Last Updated 21 ಫೆಬ್ರುವರಿ 2020, 22:28 IST
   

ನವದೆಹಲಿ: ಆಯುರ್ವೇದ, ಯುನಾನಿ ಮತ್ತು ಹೋಮಿ ಯೋಪಥಿ ಪದ್ಧತಿ ಅಧ್ಯಯನಕ್ಕೆ ನಿಗದಿಪಡಿಸಿರುವ ಕನಿಷ್ಠ ಅರ್ಹತೆಗಳನ್ನು ಯಾವುದೇ ಕಾರಣಕ್ಕೂ ಕಡಿಮೆಗೊಳಿಸಲು ಅವಕಾಶ ಇಲ್ಲ. ಈಗಿರುವ ನಿಯಮಾವಳಿಗಳು ಸಮರ್ಪಕವಾಗಿವೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಬಿಎಎಂಎಸ್‌, ಬಿಯುಎಂಎಸ್‌, ಬಿಎಸ್‌ಎಂಎಸ್‌, ಬಿಎಚ್‌ಎಂಎಸ್‌ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್‌) ಹಾಜರಾಗುವುದು ಕಡ್ಡಾಯ ಎಂದಿದೆ.

‘ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಪದವಿ ಪಡೆದವರು ಸಹ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಕನಿಷ್ಠ ಗುಣಮಟ್ಟದ ಶಿಕ್ಷಣ ಪಡೆಯದಿದ್ದರೆ ಅರೆಬೆಂದ ವೈದ್ಯರಾಗುತ್ತಾರೆ’ ಎಂದು ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಮತ್ತು ದೀಪಕ್‌ ಗುಪ್ತಾ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.