ಚಿತ್ರದುರ್ಗ: ಸಾವರ್ಕರ್ ಕುರಿತು ನೀಡಿದ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಕೇಳುವಂತೆ ತಾಕೀತು ಮಾಡಿ ಮತ್ತೊಂದು ಅನಾಮಧೇಯ ಪತ್ರ ಕಾದಂಬರಿಕಾರ ಬಿ.ಎಲ್.ವೇಣು ಅವರಿಗೆ ಬಂದಿದೆ.
ಕೈಬರಹದ ಎರಡು ಪುಟಗಳ ಪತ್ರದ ಕೊನೆಯಲ್ಲಿ ‘ಸಹಿಷ್ಣು ಹಿಂದೂ’ ಎಂಬ ಉಲ್ಲೇಖವಿದೆ. ಆದರೆ, ಇದಕ್ಕೆ ವಿಳಾಸವಿಲ್ಲ. ‘61 ಸಾಹಿತಿಗಳಿಗೆ ಬುದ್ದಿ ಹೇಳಿ ಹಾಗೂ ಕ್ಷಮೆ ಕೇಳಿ. ಇಲ್ಲವಾದರೆ ಕಾಲನ ಉಪಚಾರಕ್ಕೆ ಸಿದ್ಧರಾಗಿ’ ಎಂಬ ಬೆದರಿಕೆಯನ್ನು ಹಾಕಲಾಗಿದೆ.
‘ಸಾವರ್ಕರ್ ಅವರು ಇಡೀ ಜೀವನವನ್ನು ಸ್ವಾತಂತ್ರ್ಯ ಚಳವಳಿಯ ಯಜ್ಞಕಾರ್ಯಕ್ಕೆ ಅರ್ಪಣೆ ಮಾಡಿದ್ದಾರೆ. ಅಂಥವರನ್ನು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರುವುದಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಬರಗೂರು ರಾಮಚಂದ್ರಪ್ಪ ಅವರು ಪಠ್ಯ ಪರಿಷ್ಕರಣೆ ವಿಚಾರದಲ್ಲಿ ನಾಡದ್ರೋಹದ ಕೆಲಸ ಮಾಡಿದ್ದಾರೆ. ಅನೇಕ ಮಹನೀಯರ ಪಾಠವನ್ನು ಕಿತ್ತುಹಾಕಿದ್ದರು. ಇವರ ಬೆಂಬಲಕ್ಕೆ 61 ಸಾಹಿತಿಗಳು ನಿಂತಿದ್ದಾರೆ. ಈ ಎಲ್ಲರನ್ನೂ ಗಲ್ಲಿಗೇರಿಸಬೇಕು, ಇಲ್ಲವೇ ಗುಂಡಿಕ್ಕಬೇಕು. ಈ ದೇಶದಲ್ಲಿ ಹುಟ್ಟಿ ಭಗವದ್ಗೀತೆಯ ಮೇಲೆ ಏಕಿಷ್ಟು ಹೀನ ಭಾವನೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.