ADVERTISEMENT

ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಪಿ. ರವಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 15:56 IST
Last Updated 9 ಆಗಸ್ಟ್ 2023, 15:56 IST
   

ಬೆಂಗಳೂರು: ಏಳು ಮಂದಿ ಐಎಫ್‌ಎಸ್‌ ಅಧಿಕಾರಿಗಳು ಹಾಗೂ ರಾಜ್ಯ ಅರಣ್ಯ ಸೇವೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಒಬ್ಬ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಬುಧವಾರ ಆದೇಶ ಹೊರಡಿಸಿದ್ದು, 1992ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ ಬಿ.ಪಿ. ರವಿ ಅವರನ್ನು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಇತರ ವರ್ಗಾವಣೆಗಳ ವಿವರ: ಸಂತೋಷ್‌ ಕುಮಾರ್‌– ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್‌), ಮಾನವ ಸಂಪನ್ಮೂಲ ಅಭಿವೃದ್ಧಿ, ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡ; ವಿಜಯ್‌ ಮೋಹನ್‌ ರಾಜ್‌– ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು; ಗೀತಾಂಜಲಿ ವಿ.– ಎಪಿಸಿಸಿಎಫ್‌, ಸಾಮಾಜಿಕ ಅರಣ್ಯ ಮತ್ತು ಯೋಜನೆಗಳು ಹಾಗೂ ಮೌಲ್ಯಮಾಪನ ವಿಭಾಗದ ಹೆಚ್ಚುವರಿ ಹೊಣೆ.

ಆರ್‌. ರವಿಶಂಕರ್‌– ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನೆ; ಚಂದ್ರಶೇಖರ್ ನಾಯಕ– ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ; ಡಿ. ಮಹೇಶ್‌ ಕುಮಾರ್‌– ಕಾರ್ಯನಿರ್ವಾಹಕ ನಿರ್ದೇಶಕ, ಚಾಮರಾಜೇಂದ್ರ ಮೃಗಾಲಯ, ಮೈಸೂರು.

ADVERTISEMENT

ಪ್ರವೀಣ್‌ (ಎಸ್‌ಎಫ್‌ಎಸ್‌)– ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಯಚೂರು ವಿಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.