ADVERTISEMENT

ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:45 IST
Last Updated 29 ಡಿಸೆಂಬರ್ 2018, 19:45 IST
   

ಅಬ್ಬಾ... ನೋಡ, ನೋಡುತ್ತಲೇ 2018 ಕಳೆದು ಹೋಯಿತಲ್ಲ. ಸಿಹಿ-ಕಹಿ ನೆನಪುಗಳ ಜತೆಗೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಸಿರಿಸುತ್ತಿದ್ದೇವೆ. ಕಳೆದು ಹೋದ ವರ್ಷದತ್ತ ಹಿನ್ನೋಟ ಹರಿಸಿದಾಗ ಹಲವು ಘಟನೆಗಳು ಕಣ್ಮುಂದೆ ಸುಳಿಯುತ್ತವೆ.

ರಾಷ್ಟ್ರ ಹಾಗೂ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರುಗಳಿಸಿದ ಗಣ್ಯರು ಕೊನೆಯುಸಿರೆಳೆದು ನೆನಪುಗಳನ್

ನು ಬಿಟ್ಟು ಹೋಗಿದ್ದಾರೆ.

ADVERTISEMENT

ದ್ರಾವಿಡ ಸೂರ್ಯ ಅಸ್ತಂಗತ

ವಯೋಸಹಜ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 94 ವರ್ಷದ ಡಿಎಂಕೆ ನಾಯಕ ಎಂ. ಕರುಣಾನಿಧಿ ಆಗಸ್ಟ್‌ನಲ್ಲಿ ಕೊನೆಯುಸಿರೆಳೆದರು.

ಮರೀನಾ ಬೀಚ್‌ನಲ್ಲಿಯೇ ಅಣ್ಣಾ ಸಮಾಧಿ ಪಕ್ಕ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿತು. ಮದ್ರಾಸ್‌ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿ ಅನುಮತಿ ಪಡೆಯಲಾಯಿತು.

ಮೌನವಾದ ಮಾತುಗಾರ

ಅನಾರೋಗ್ಯದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಆಗಸ್ಟ್‌ 16ರಂದು ಸಂಜೆ ಕೊನೆಯುಸಿರೆಳೆದರು.

ಅತ್ಯುತ್ತಮ ವಾಗ್ಮಿ, ಕವಿಯಾಗಿದ್ದ ಅಟಲ್‌ ನಿಧನದಿಂದ ಒಂದು ಯುಗವೇ ಅಂತ್ಯಗೊಂಡಂತಾಗಿದೆ ಎಂದು ಇಡೀ ದೇಶ ಕಂಬನಿ ಮಿಡಿಯಿತು.

ಗಂಗೆಗಾಗಿ ಪ್ರಾಣಬಿಟ್ಟ ವಿಜ್ಞಾನಿ

ಗಂಗಾ ನದಿಯ ರಕ್ಷಣೆಗಾಗಿ ಆಮರಣಾಂತ ಉಪವಾಸ ಕೈಗೊಂಡಿದ್ದ ಸ್ವಾಮಿ ಜ್ಞಾನಸ್ವರೂಪ ಸಾನಂದರು 112 ದಿನಗಳ ನಂತರ ಪ್ರಾಣ ಬಿಟ್ಟರು. ವಿಜ್ಞಾನಿಯಾಗಿದ್ದ ಜಿ.ಡಿ. ಅಗರ್‌ವಾಲ್ 79ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು.

‘ಗಂಗೆ ನನ್ನ ತಾಯಿ, ಅವಳನ್ನು ರಕ್ಷಿಸುವುದು ನನ್ನ ಕರ್ತವ್ಯ, ಈ ಕೈಂಕರ್ಯದ ಹಾದಿಯಲ್ಲಿ ನನ್ನ ಪ್ರಾಣ ಹೋದರೆ ನಷ್ಟವೇನಿಲ್ಲ’ ಎಂದು ಗಂಗಾ ನದಿಪಾತ್ರದ ರಕ್ಷಣಾ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

*ಎಂ. ಎಚ್‌. ಅಂಬರೀಷ್
ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಹೃದಯಾಘಾತದಿಂದ ನಿಧನ

* ಲಕ್ಷ್ಮೀವರ ತೀರ್ಥರು
ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಯತಿ ಪರಂಪರೆಯಲ್ಲಿ 30ನೆಯವರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ನಿಗೂಢ ಸಾವು

* ಜಾಫರ್ ಷರೀಫ್
ಕರ್ನಾಟಕದ ಪಾಲಿಗೆ ರೈಲ್ವೆ ಷರೀಫ್ ಎನಿಸಿಕೊಂಡ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ತೀವ್ರ ಉಸಿರಾಟ ಸಮಸ್ಯೆಯಿಂದ ಸಾವು.

* ಕೆ.ಎಸ್. ಪುಟ್ಟಣ್ಣಯ್ಯ
ರೈತಪರನಾಯಕ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು

* ಸೂಲಗಿತ್ತಿ ನರಸಮ್ಮ
10 ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಹೆರಿಗೆಗಳನ್ನು ಮಾಡಿಸಿದ ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತ ನರಸಮ್ಮ ನಿಧನ

* ಸಿದ್ದು ಬಿ. ನ್ಯಾಮಗೌಡ
ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅಕಾಲಿಕ ಮರಣ

* ಅನಂತ್ ಕುಮಾರ್
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ವಿಧಿವಶ.

ಸಾಹಿತ್ಯ ಲೋಕದಿಂದ ಮರೆಯಾದವರು

* ಸುಮತೀಂದ್ರ ನಾಡಿಗ

* ಎಂ.ಎನ್. ವ್ಯಾಸರಾವ್

* ಗಾಯಕಿ ಶ್ಯಾಮಲಾ ಜಾಗೀರದಾರ್

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.