ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೆ ಯೋಜನೆ ರೂಪಿಸಿದ್ದ ಆರೋಪಿಗಳು ಅವರನ್ನು ಮನೆಯಿಂದ ಹೊರಗೆ ಬರುವಂತೆ ಮಾಡಲು ಇಬ್ಬರು ಯುವತಿಯರನ್ನು ಬಳಸಿಕೊಂಡಿದ್ದರು ಎನ್ನುವ ಅಂಶ ಚರ್ಚೆಗೆ ಗ್ರಾಸವಾಗಿದೆ.
‘ಫೆ.20ರ ರಾತ್ರಿ 9ರ ಸುಮಾರಿಗೆ ಹರ್ಷ ಅವರ ಮೊಬೈಲ್‌ಗೆ ವಿಡಿಯೊ ಕಾಲ್ ಮಾಡಿದ್ದ ಇಬ್ಬರು ಯುವತಿಯರು ತಮ್ಮನ್ನು ಪರಿಚಯಿಸಿಕೊಂಡು, ತುರ್ತು ಸಹಾಯ ಬೇಕೆಂದು ಬರಲು ಕರೆದರು. ಇಬ್ಬರು ಇದ್ದಿದ್ದರಿಂದ ಬೈಕ್ ತರದೆ ನಡೆದುಕೊಂಡು ಬರುವಂತೆ ಹೇಳಿದರು. ಭಾರತಿ ಕಾಲೊನಿ ಬಳಿ ಜತೆಯಾಗುವುದಾಗಿ ಅವರು ವಿನಂತಿಸಿದ್ದರು’ ಎಂದು ಹರ್ಷನ ಸ್ನೇಹಿತ ನವೀನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
‘ಹರ್ಷ, ಆನಂದ್, ಮಂಜ ಹಾಗೂ ನಾನು ಜತೆಯಲ್ಲೇ ಇದ್ದೆವು. ವಿಡಿಯೊ ಕಾಲ್ ಮಾಡಿದಾಗಲೇ ಅವರನ್ನು ಹರ್ಷ ನಮಗೆ ತೋರಿಸಿದ. ಇವರ ಪರಿಚಯ ಇದೆಯೇ ಎಂದು ಕೇಳಿದ? ನಾವು ಇಲ್ಲ ಎಂದಾಗ, ನಡೆದೇ ಹೊರಟೆವು. ಸ್ವಲ್ಪ ದೂರ ಹೋದ ನಂತರ ಬೈಕ್ ತರಲು ನಮ್ಮನ್ನು ಕಳುಹಿಸಿದ. ನಾವು ಬೈಕ್ ತೆಗೆದುಕೊಂಡು ಅಲ್ಲಿಗೆ ತೆರಳುವಷ್ಟರಲ್ಲೇ ಹರ್ಷನ ಕೊಲೆಯಾಗಿತ್ತು’ ಎಂದರು.
*
ಹತ್ಯೆಗೂ ಮುನ್ನ ಯುವತಿಯರು ಕರೆ ಮಾಡಿದ್ದರು ಎನ್ನುವ ವಿಷಯ ಈಗಷ್ಟೆ ಪ್ರಸಾರವಾಗುತ್ತಿದೆ. ಹರ್ಷ ಅವರ ಮೊಬೈಲ್ ಪತ್ತೆಯಾಗದೇ ಈ ಕುರಿತು ಖಚಿತಪಡಿಸಲಾಗದು.
–ಲಕ್ಷ್ಮೀಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
*
ಇವನ್ನೂ ಓದಿ
*ರಕ್ತದ ಮಡುವಿನಲ್ಲಿದ್ದ ಹರ್ಷನ ವಿಡಿಯೊವನ್ನು ಸ್ನೇಹಿತರಿಗೆ ರವಾನಿಸಿದ್ದ ಹಂತಕರು
*ಹರ್ಷನ ಕುಟುಂಬಕ್ಕೆ ಹರಿದುಬಂತು ₹50 ಲಕ್ಷಕ್ಕೂ ಹೆಚ್ಚು ಹಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.