ADVERTISEMENT

ಪ್ರಚೋದನಕಾರಿ ಭಾಷಣ ಸಾಧ್ಯತೆ; ಸಂಬಾಜಿ ಭಿಡೆ ಜಿಲ್ಲಾ ಪ್ರವೇಶಕ್ಕೆ ತಡೆ

ಶಿವಪ್ರತಿಷ್ಠಾನ–ಹಿಂದೂಸ್ಥಾನ ಸಂಘಟನೆಯ ಕಾರ್ಯಕ್ರಮ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 7:55 IST
Last Updated 19 ಜುಲೈ 2018, 7:55 IST
ಸಂಬಾಜಿ ಭಿಡೆ
ಸಂಬಾಜಿ ಭಿಡೆ   

ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯ ಶಿವಪ್ರತಿಷ್ಠಾನ–ಹಿಂದೂಸ್ಥಾನ ಸಂಘಟನೆ ಮುಖಂಡ ಮನೋಹರ ಅಲಿಯಾಸ್ ಸಂಬಾಜಿ ಭಿಡೆ ಅವರು ಜಿಲ್ಲೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ.

ಜುಲೈ 21ರ ಮಧ್ಯರಾತ್ರಿ 12ರಿಂದ ಜುಲೈ 31ರ ಮಧ್ಯಾಹ್ನ 12ರವರೆಗೆ ಜಿಲ್ಲಾ ವ್ಯಾಪ್ತಿಯ ಯಾವುದೇ ಪ್ರದೇಶಕ್ಕೆ ಅವರು ಭೇಟಿ ನೀಡುವುದಕ್ಕೆ ನಿಷೇಧ ವಿಧಿಸಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಗಜಾನನ ಸಾಂಸ್ಕೃತಿಕ ಭವನದಲ್ಲಿ ಶಿವಪ್ರತಿಷ್ಠಾನ–ಹಿಂದೂಸ್ಥಾನ ಸಂಘಟನೆಯು ಜುಲೈ 21ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ‘ರಾಯಗಡ ಸುವರ್ಣ ಸಿಂಹಾಸನದ ಇತಿಹಾಸ’ ವಿಷಯ ಕುರಿತು ಭಾಷಣ ಮಾಡಲು ಅವರನ್ನು ಆಹ್ವಾನಿಸಲಾಗಿತ್ತು.

ADVERTISEMENT

ಭಿಡೆ ಅವರ ಪ್ರಚೋದನಕಾರಿ ಭಾಷಣದಿಂದ ದಲಿತರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಸಮಾಜದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಲು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗಾಗಿ ಈ ನಿಷೇಧ ಹೊರಡಿಸಲಾಗಿದೆ ಆದೇಶದಲ್ಲಿ ಎಂದು ತಿಳಿಸಲಾಗಿದೆ.

ಹೋದ ವರ್ಷ ಇಲ್ಲಿನ ಸಂಭಾಜಿ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಜಿಲ್ಲಾಡಳಿತದಿಂದ ಅವರಿಗೆ ಅನುಮತಿ ದೊರೆತಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.