ಬಾದಾಮಿ: ಈ ಬಾರಿ ಬನಶಂಕರಿ ಜಾತ್ರೆಯಲ್ಲಿ ರಂಗಾಸಕ್ತರನ್ನು ಸೆಳೆಯಲು ಪೌರಾಣಿಕ, ಸಾಮಾಜಿಕ ಮತ್ತು ಹಾಸ್ಯನಾಟಕಗಳನ್ನು ಪ್ರದರ್ಶಿಸಲು ರಂಗಭೂಮಿ ಕಲಾವಿದರು ಸಜ್ಜಾಗಿದ್ದಾರೆ.
ನಾಟಕ ಸಂಘಗಳು ಪ್ರತಿವರ್ಷ ನಾಟಕಗಳಿಗೆ ಆಕರ್ಷಕ ಶೀರ್ಷಿಕೆ ಇಟ್ಟು ರಂಗಾಸಕ್ತರನ್ನು ಸೆಳೆಯುವುದು ವಾಡಿಕೆ. ಈ ಬಾರಿ ತಾಲ್ಲೂಕಿನ ಆಲೂರ ಎಸ್.ಕೆ.ಗ್ರಾಮದ ಅಂಜನಿಪುತ್ರ ನಾಟ್ಯ ಸಂಘದಿಂದ ಪೌರಾಣಿಕ ನಾಟಕ ರಕ್ತರಾತ್ರಿ, ಕಲ್ಲೂರಿನ ಗುರು ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಮನಸ್ಯಾಕ ಕೊಟ್ಟಿ– ಕೈಯಾಕ ಬಿಟ್ಟಿ, ಜೇವರ್ಗಿಯ ಶ್ರೀಗುರು ವಿಶ್ವರಾಧ್ಯ ಸಂಘದಿಂದ ಮಬ್ ಹಿಡಿಶ್ಯಾಳ ಮದರಂಗಿ, ಜೇವರ್ಗಿಯ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ಕುಂಟ ಕೋಣ ಮೂಕ ಜಾಣಸಾಮಾಜಿಕ ನಾಟಕ ಪ್ರದರ್ಶನವಾಗಲಿವೆ.
ದಾವಣಗೆರೆ ಕೆ.ಬಿ.ಆರ್.ಸಂಘದಿಂದ ಸಿಂಪಲ್ ಹುಡುಗ ಡಿಂಪಲ್ ಹುಡುಗಿ, ಗುಬ್ಬಿಎಸ್.ಆರ್.ನಾಟ್ಯ ಸಂಘದಿಂದ ಕಾಗಕ್ಕ ಗುಬ್ಬಕ್ಕ, ಮಂಡಲಗಿರಿ ಸಿದ್ದಲಿಂಗೇಶ್ವರ ಸಂಘದಿಂದ ಗೌರಿ ಹೋದಳು ಗಂಗೆ ಬಂದಳು, ಕಮತಗಿ ಹುಚ್ಚೇಶ್ವರ ನಾಟ್ಯ ಸಂಘದಿಂದ ಹೌದ್ದ ಹುಲಿಯ, ಕುಂಟೋಜಿ ಘನಮಠೇಶ್ವರ ನಾಟ್ಯ ಸಂಘದಿಂದ ಬಂದರ ಬಾರ ಬಸಣ್ಣಿ, ಗುಳೇದಗುಡ್ಡ ಸಂಗಮೇಶ್ವರ ನಾಟ್ಯ ಸಂಘದಿಂದ ಹೌದಲೆ ಗಂಗಿ; ಊದಲೇನ ಪುಂಗಿ ನಾಟಕಗಳು ಗುರುವಾರದಿಂದ ಪ್ರದರ್ಶನ ಆರಂಭಿಸಿವೆ. ರಸಿಕರು ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಲು ಕಾದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.