ಬೆಂಗಳೂರು: ಶಂಕಿತ ಉಗ್ರರಿಂದ ಸಿಸಿಬಿ ಪೊಲೀಸರು 7 ನಾಡಬಂದೂಕು, 45 ಜೀವಂತ ಗುಂಡುಗಳು, ವಾಕಿಟಾಕಿ ಹಾಗೂ 12 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಮಿಷನರ್ ಬಿ.ದಯಾನಂದ ತಿಳಿಸಿದರು.
ಹೆಬ್ಬಾಳ ಪೊಲೀಸ್ ಠಾಣೆಯ ಮನೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಹದಿನೈದರಂದು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಎಲ್ಲರನ್ನು ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಬಂಧನಕ್ಕೆ ಕೇಂದ್ರದ ತನಿಖಾ ತಂಡಗಳನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದರು.
ಜೈಲೇ ತರಬೇತಿ ಕ್ಯಾಂಪಸ್
2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ನಸೀರ್ ಮದಾನಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದನು. 2017ರಲ್ಲಿ ನೂರ್ ಅಹಮದ್ ಕೊಲೆ ಪ್ರಕರಣದಲ್ಲಿ ಜುನೈದ್ ಸೇರಿದಂತೆ 21 ಮಂದಿ ಜೈಲು ಸೇರಿದ್ದರು. ಅಲ್ಲಿ ನಸೀರ್ ಸಂಪರ್ಕದಿಂದ ಎಲ್ಲರೂ ಸಂಚು ರೂಪಿಸಿದ್ದರು. ಜುನೈದ್ ಮೇಲೆ 2017ರಲ್ಲಿ ಕೊಲೆ ಪ್ರಕರಣ, 2020 ರಕ್ತಚಂದನ, 2021ನಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದ್ದವು. 18 ತಿಂಗಳು ಶಿಕ್ಷೆ ಅನುಭವಿಸಿದ್ದ ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈತನೇ ಮಾಸ್ಟರ್ ಮೈಡ್ ಆಗಿದ್ದಾನೆ. ಶಂಕಿತರಿಗೆ ವಿದೇಶದಿಂದ ನೆರವು ಬರುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.
ಇದನ್ನು ಓದಿ: ಉಗ್ರರ ಟಾರ್ಗೆಟ್ ಬೆಂಗಳೂರು: ಸ್ಫೋಟಕ, ಶಸ್ತ್ರಾಸ್ತ್ರ ಸಹಿತ ಐವರು ಶಂಕಿತ ಉಗ್ರರ ಬಂಧನ
ಇದನ್ನು ಓದಿ : ಬೆಂಗಳೂರು | ಆರ್.ಟಿ.ನಗರದ ಸುಹೇಲ್ ಮನೆಯಲ್ಲಿ ಸೇರುತ್ತಿದ್ದ ಶಂಕಿತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.