ಬೆಂಗಳೂರು: ರದ್ದು ಅಗಿರುವ ಹಳೆ ನೋಟು ಗಳನ್ನು ಪಡೆದು ಹೊಸ ನೋಟು ಅಗಿ ಮಾಡುತ್ತೇವೆ ಎಂದು ವಂಚಿಸುತಿದ್ದ ನಾಲ್ವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರ ಪ್ರಸಾದ್ , ಸುರೇಶ್ ಕುಮಾರ್, ಶಾನವಾಜ್, ಸತೀಶ್ ಬಂಧಿತರು.
ಆರೋಪಿಗಳಿಂದ ₹99 ಲಕ್ಷ ಮೌಲ್ಯದ ಹಳೆ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ಮೂಲಕ ಹಣವನ್ನು ಬದಲಿಸುವುದಾಗಿ ಆರೋಪಿಗಳು ನಂಬಿಸುತ್ತಿದ್ದರು.
ನಾಗರಾಜ್ ಎಂಬುವವರಿಗೆ ಹಣ ಕೊಡಿಸುವ ಮೂಲಕ ವಂಚನೆ ಮಾಡಲು ಅರೋಪಿಗಳು ಮುಂದಾಗಿದ್ದರು.
ಒಂದು ಕೋಟಿ ಹಳೆ ನೋಟಿಗೆ ಹತ್ತು ಲಕ್ಷ ಹೊಸ ನೋಟು ಕೊಡುವುದಾಗಿ ನಂಬಿಸಿದ್ದ ಅರೋಪಿಗಳು, ನಂತರ ಈ ಹಳೆ ನೋಟುಗಳನ್ನು ರಿಸರ್ವ್ ಬ್ಯಾಂಕ್ ಗೆ ಹಸ್ತಾಂತರ ಮಾಡುತ್ತೇವೆ. ಇದಕ್ಕೆ ಎರಡು ಲಕ್ಷ ನಮಗೆ ಕಮಿಷನ್ ಕೊಡಬೇಕು ಎಂದು ಹೇಳುತ್ತಿದ್ದರು. ಹೀಗೆ ಬ್ಯಾಂಕ್ ಗೆ ನೀಡಿದರೆ ಹದಿನಾಲ್ಕು ಲಕ್ಷ ಹಣ ಸಿಗುತ್ತದೆ ಎಂದು ನಂಬಿಸುತ್ತಿದ್ದರು.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಇದೇ ರೀತಿ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದೂ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.