ADVERTISEMENT

ಬನ್ನೇರುಘಟ್ಟ ಉದ್ಯಾನಕ್ಕೆ ಬಿಳಿ ಹುಲಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 15:53 IST
Last Updated 24 ಏಪ್ರಿಲ್ 2023, 15:53 IST
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬಂದಿರುವ ಮೂರು ವರ್ಷದ ಬಿಳಿ ಗಂಡು ಹುಲಿ
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬಂದಿರುವ ಮೂರು ವರ್ಷದ ಬಿಳಿ ಗಂಡು ಹುಲಿ   

ಆನೇಕಲ್ (ಬೆಂಗಳೂರು ಗ್ರಾಮಾಂತರ): ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ಹುಲಿ ಕುಟುಂಬಕ್ಕೆ ಶುಕ್ರವಾರ ಬಿಳಿ ಗಂಡು ಹುಲಿಯೊಂದು ಸೇರ್ಪಡೆಯಾಗಿದೆ.

ಪ್ರಾಣಿ ವಿನಿಮಯ ಯೋಜನೆ ಅಡಿ ಚೆನ್ನೈನ ವಂಡಲೂರಿನ ಅರಿಗ್ನಾರ್‌ ಅಣ್ಣಾ ಜೈವಿಕ ಉದ್ಯಾನದಿಂದ ಏ. 21ರಂದು ಈ ಬಿಳಿ ಹುಲಿ ತರಲಾಗಿದೆ.

ವಂಡಲೂರು ಮೃಗಾಲಯದ ಭೀಷ್ಮಾ ಮತ್ತು ಮೀನಾಗೆ ಜನಿಸಿರುವ ಮೂರು ವರ್ಷದ ಈ ಬಿಳಿ ಹುಲಿಯನ್ನು ಉದ್ಯಾನದಲ್ಲಿಯೇ ಕೆಲ ದಿನ ಪ್ರತ್ಯೇಕವಾಗಿ (ಕ್ವಾರೆಂಟೈನ್‌) ಇಡಲಾಗುವುದು ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್‌ ಪನ್ವಾರ್‌ ತಿಳಿಸಿದ್ದಾರೆ.

ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನದ ಸನಾ ಮತ್ತು ಶಂಕರ್‌ಗೆ 2020ರಲ್ಲಿ ಜನಿಸಿದ್ದ ಶೇರ್‌ಯಾರ್‌ ಮೂರು ವರ್ಷದ ಗಂಡು ಸಿಂಹವನ್ನು ವಂಡಲೂರು ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.