ADVERTISEMENT

ರಾಜ್ಯದ ನ್ಯಾಯಮೂರ್ತಿಗಳ ಕಡೆಗಣನೆ ಬೇಡ: CJIಗೆ ವಕೀಲರ ಸಂಘದ ಮಾಜಿ ಅಧ್ಯಕ್ಷರ ಪತ್ರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:29 IST
Last Updated 16 ಜುಲೈ 2024, 15:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಕರ್ನಾಟಕದ ನ್ಯಾಯಮೂರ್ತಿಗಳು ಅರ್ಹತೆಯಲ್ಲಿ ಅತ್ಯುತ್ತಮ ಎನಿಸಿಕೊಂಡಿದ್ದರೂ ಅಂತಹವರಿಗೆ ದೇಶದ ಇತರ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗುವ ಅವಕಾಶ ದೊರೆಯುತ್ತಿಲ್ಲ’ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್‌ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತಂತೆ ತಮ್ಮ ಎರಡು ಪುಟಗಳ ಪತ್ರದಲ್ಲಿ ವಿವರಿಸಿರುವ ಅವರು, ‘ಇಂತಹ ನಿರ್ಲಕ್ಷ್ಯ ನ್ಯಾಯಾಂಗದ ಉನ್ನತ ಶ್ರೇಣಿಯಲ್ಲಿ ವೈವಿಧ್ಯತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕೊರತೆಯನ್ನು ಸೂಚಿಸುತ್ತದೆ. ರಾಜ್ಯದ ಹಿರಿಯ ನ್ಯಾಯಮೂರ್ತಿಗಳಿಗೆ ಸೂಕ್ತ ಸ್ಥಾನಮಾನ, ಅವಕಾಶ ನೀಡದ ಈ ಪ್ರವೃತ್ತಿ ಒಪ್ಪುವಂತಹದಲ್ಲ. ಕೂಡಲೇ, ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅಸಮತೋಲನ ಪರಿಹರಿಸಲು ಕೊಲಿಜಿಯಂ ಮುಖ್ಯಸ್ಥರಾದ ತಾವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. 

ADVERTISEMENT

‘ಕರ್ನಾಟಕ ಹೈಕೋರ್ಟ್ ಕಾಲಕಾಲಕ್ಕೆ ಸಮರ್ಥ ಮತ್ತು ಅನುಭವಿ ನ್ಯಾಯಮೂರ್ತಿಗಳನ್ನು ನಾಡಿಗೆ, ದೇಶಕ್ಕೆ ನೀಡುತ್ತಾ ಬಂದಿದೆ. ಗಣನೀಯ ಸಂಖ್ಯೆಯ ವಕೀಲರು ತಮ್ಮ ವೃತ್ತಿ ಬದುಕಿನಲ್ಲಿ ಅಭೂತಪೂರ್ವ ಕಾನೂನು ಚಾತುರ್ಯ ಮತ್ತು ನ್ಯಾಯಾಂಗದ ಮನೋಧರ್ಮವನ್ನು ಸಾಂವಿಧಾನಕವಾಗಿ ಎತ್ತಿಹಿಡಿಯುವಲ್ಲಿ ಬದ್ಧತೆ ಪ್ರದರ್ಶಿಸಿದ್ದಾರೆ. ಹಾಗಾಗಿ, ಕರ್ನಾಟಕವೂ ಸೇರಿದಂತೆ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಪ್ರದೇಶಗಳಿಂದ ಅರ್ಹ ಅಭ್ಯರ್ಥಿಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ತಾವು ಸಂಘಟಿತ ಪ್ರಯತ್ನ ಮಾಡುತ್ತೀರಿ’ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.