ADVERTISEMENT

‘ಇಂಡಿಯಾ’ ಒಕ್ಕೂಟ ಛಿದ್ರ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 15:43 IST
Last Updated 24 ಜನವರಿ 2024, 15:43 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಕಾಂಗ್ರೆಸ್ ವರ್ತನೆಯಿಂದ ಬೇಸತ್ತು ‘ಇಂಡಿಯಾ’ ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ ಹೊರಗೆ ಹೋಗಿದ್ದಾರೆ. ಶರತ್‌ ಪವಾರ್‌, ನಿತೀಶ್‌ ಕುಮಾರ್‌ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಶೀಘ್ರವೇ ‘ಇಂಡಿಯಾ’ ಒಕ್ಕೂಟ ಛಿದ್ರವಾಗಲಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಇಂಡಿಯಾ’ ಒಕ್ಕೂಟ ಮುಂದಿನ ದಿನಗಳಲ್ಲಿ ಉಳಿಯುವುದಿಲ್ಲ. ಕಾಂಗ್ರೆಸ್‌ನವರ ಕಾಟದಿಂದಾಗಿ ಅವರೆಲ್ಲ ಹೊರಗೆ ಬರುತ್ತಿದ್ದಾರೆ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆದ ಮೇಲೆ ಒಕ್ಕೂಟ ಇರುವುದಿಲ್ಲ. ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್‌ನಿಂದ ಭ್ರಮನಿರಸನವಾಗಿದೆ ಎಂದು ಹೇಳಿದರು.

ರಾಹುಲ್‌ ಭಕ್ತಿಯ ಕನ್ನಡಕ ಹಾಕಲಿ:

ADVERTISEMENT

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರಾಮನ ಕುರಿತು ಆಡಿರುವ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ರಾವಣನ ಕನ್ನಡಕ ಹಾಕಿಕೊಂಡು ನೋಡಿದರೆ ರಾಮರಾಜ್ಯ ಕಾಣಿಸುವುದಿಲ್ಲ. ಭಕ್ತಿಯ ಕನ್ನಡಕದಿಂದ ನೋಡಿದರೆ ಎಲ್ಲೆಡೆಯೂ ರಾಮ ಕಾಣಿಸುತ್ತಾನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.