ಬೆಂಗಳೂರು: ಸಂಘಟನೆಯೇ ನನ್ನನ್ನು ಇಲ್ಲಿಯ ವರೆಗೆ ತಂದು ನಿಲ್ಲಿಸಿದೆ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ನೂತನ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಮೇಯರ್ ಆಗುವ ಕನಸು ನನಗಿರಲಿಲ್ಲ. ಸಂಘಟನೆಯಷ್ಟೇ ನನ್ನ ಗುರಿಯಾಗಿತ್ತು. ಪಕ್ಷದಿಂದ ಟಿಕೆಟ್ ಕೊಟ್ಟುಗೆಲ್ಲಿಸಿದರು. ಸಂಘಟನೆ ಕೊಟ್ಟ ಅವಕಾಶ ಇದು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕೊನೆ ಹಾಡಬೇಕು. ಅದರ ಕಡೆಗೆ ಮೊದಲು ಗಮನ ಹರಿಸುತ್ತೇನೆ. ಅದರ ಜೊತೆಗೆ ಪ್ಲಾಸ್ಟಿಕ್ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಯಡಿಯರೂಪ್ಪ, ನರೇಂದ್ರ ಮೋದಿ ಅವರಿಗೆ ಒಳ್ಳೇ ಹೆಸರು ತರುವ ಕೆಲಸ ಮಾಡುತ್ತೇನೆ. ನಾಲ್ಕು ವರ್ಷಗಳ ನಂತರ ಬಿಜೆಪಿಗೆ ಅವಕಾಶ ಸಿಕ್ಕಿದೆ. ಇಂದು ರಾಜ್ಯದಲ್ಲಿಬಿಜೆಪಿಗೆ ಉತ್ತಮ ವಾತಾವರಣ ಇದೆ. ಕಾಂಗ್ರೆಸ್–ಜೆಡಿಎಸ್‌ನಿಂದ ಹಲವರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ.ದೇಶ ಮತ್ತುಬೆಂಗಳೂರನ್ನುಚೆನ್ನಾಗಿ ಕಟ್ಟುತ್ತೇವೆ. ವಾಸ್ತವವಾಂಶಗಳ ಆಧಾರದ ಮೇಲೆ ಬಜೆಟ್ ಮಂಡಿಸುತ್ತೇವೆ. ಯಡಿಯೂರಪ್ಪ, ಹಿರಿಯ ನಾಯಕರು, ಶಾಸಕರು, ಸಂಸದರು, ಪಾಲಿಕೆಸದಸ್ಯರು ಜೊತೆಗೆ ಚರ್ಚಿಸಿ ಉತ್ತಮಬಜೆಟ್ ನೀಡುತ್ತೇವೆ.
ಗೌತಮ್ ಕುಮಾರ್ ಕುರಿತು ಒಂದಷ್ಟು
ಜೋಗುಪಾಳ್ಯ ವಾರ್ಡ್ ಸಂಖ್ಯೆ 89ರ ಸದಸ್ಯ ಬಿಜೆಪಿಯ ಗೌತಮ್ ಕುಮಾರ್ ಬಿ.ಕಾಂ ಪದವೀಧರ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.