ಬೆಂಗಳೂರು: ರಕ್ಷಣಾ ವಲಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಈ ವರ್ಷ ವೈವಿಧ್ಯಮಯ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗಾಗಿ ₹7,075 ಕೋಟಿ ಮೌಲ್ಯದಷ್ಟು ಕಾರ್ಯಾದೇಶ ಪಡೆದಿದ್ದು, ಹೊಸದಾಗಿ ಕೊಚ್ಚಿ ಶಿಪ್ ಯಾರ್ಡ್ ಲಿಮಿಟೆಡ್‌ನಿಂದ ₹850 ಕೋಟಿ ಮೌಲ್ಯದ ಕಾರ್ಯಾದೇಶ ಪಡೆದಿದೆ.
ಕೊಚ್ಚಿ ಶಿಪ್ ಯಾರ್ಡ್ ಲಿಮಿಟೆಡ್‌ಗೆ ಬಹು ಕಾರ್ಯಗಳನ್ನು ನಿರ್ವಹಿಸುವ ದೇಶೀ ನಿರ್ಮಿತ ಎಕ್ಸ್ ಬ್ಯಾಂಡ್ ರೇಡಾರ್ ಪೂರೈಸಬೇಕಾಗಿದೆ. ಈ ಸಂಬಂಧ ಬಿಇಎಲ್ ಜನರಲ್ ಮ್ಯಾನೇಜರ್ ಟಿ.ಡಿ.ನಂದಕುಮಾರ್ ಅವರು ಕೊಚ್ಚಿ ಶಿಪ್ ಯಾರ್ಡ್ ನಿರ್ದೇಶಕ ಶ್ರೀಜಿತ್ ಅವರಿಂದ ಬುಧವಾರ ಆದೇಶ ಪತ್ರವನ್ನು ಪಡೆದರು.
ಈ ರೇಡಾರ್ ಅನ್ನು ಡಿಆರ್‌ಡಿಒ ವಿನ್ಯಾಸಗೊಳಿಸಿದ್ದು, ಬಿಇಎಲ್ ತಯಾರಿಸಿದೆ. ನೌಕಾ ಪಡೆಯ ನೌಕೆಗಳಿಗೆ ವೈಮಾನಿಕ ದಾಳಿಗಳಿಂದ ರಕ್ಷಣೆ ನೀಡಲು ರೇಡಾರ್‌ಗಳು ಕ್ಷಿಪಣಿ, ಡ್ರೋನ್, ಯುದ್ಧ ವಿಮಾನಗಳನ್ನು ಪತ್ತೆ ಮಾಡುತ್ತವೆ. ಇದಲ್ಲದೇ ನೌಕೆಗಳಿಗೆ ನ್ಯಾವಿಗೇಷನ್ ಕಾಂಪ್ಲೆಕ್ಸ್ ವ್ಯವಸ್ಥೆ, ಥರ್ಮಲ್ ಇಮೇಜರ್, ಸಂವಹನ ಸಾಧನ, ಅಗ್ನಿ ನಿಯಂತ್ರಣ ವ್ಯವಸ್ಥೆ, ಗನ್ ಕಂಟ್ರೋಲ್ ಸಿಸ್ಟಮ್, ಬಿಡಿ ಭಾಗಗಳು ಸೇವೆಗಳನ್ನು ಒದಗೊಸಲು ಆಗಸ್ಟ್‌ನಲ್ಲಿ ಸುಮಾರು ₹305 ಕೋಟಿ ಮೌಲ್ಯದ ಆದೇಶ ಪಡೆಯಲಾಗಿದೆ ಎಂದು ಬಿಇಎಲ್ ಪ್ರಕಟಣೆ ತಿಳಿಸಿದೆ.
ಎರಡು ತಿಂಗಳಲ್ಲಿ ಒಟ್ಟು ₹1,155 ಕೋಟಿ ಆದೇಶ ಪಡೆದಂತಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.