ADVERTISEMENT

ಬೆಳಗಾವಿ ಅಧಿವೇಶನ | ಜಮೀರ್ ಖಾನ್ ವಿರುದ್ಧ ಧರಣಿ ಹಿಂಪಡೆದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 14:46 IST
Last Updated 12 ಡಿಸೆಂಬರ್ 2023, 14:46 IST
<div class="paragraphs"><p>ಜಮೀರ್ ಖಾನ್‌ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರು(ಸಂಗ್ರಹ ಚಿತ್ರ)</p></div>

ಜಮೀರ್ ಖಾನ್‌ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರು(ಸಂಗ್ರಹ ಚಿತ್ರ)

   

ವಿಧಾನಸಭೆ: ಸಭಾಧ್ಯಕ್ಷರ ಪೀಠ ಕುರಿತು ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಬೆಳಿಗ್ಗೆಯಿಂದ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ಹಿಂಪಡೆದರು.

ಬೆಳಿಗ್ಗೆ 9.40ಕ್ಕೆ ಕಲಾಪ ಆರಂಭವಾಯಿತು. ಆಗ, ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದುವರಿಸಿದ್ದರು. ಮಧ್ಯ ಪ್ರವೇಶಿಸಿದ ಗೃಹ ಸಚಿವ ಜಿ. ಪರಮೇಶ್ವರ, ‘ದೇಶದ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಧರಣಿ ಹಿಂಪಡೆಯಿರಿ. ಚರ್ಚೆಗೆ ಅವಕಾಶವಿದೆ. ಸದನದ ಕಲಾಪವನ್ನು ಸುಗಮವಾಗಿ ನಡೆಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ADVERTISEMENT

ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮಾತನಾಡಿ, ‘ಗೃಹ ಸಚಿವರು ಬಹಳ ತಡವಾಗಿ ಮನವಿ ಮಾಡಿದ್ದಾರೆ. ಸೋಮವಾರ ಇಡೀ ದಿನ ಸರ್ಕಾರ ಹಠಕ್ಕೆ ಬಿದ್ದು ನಮ್ಮನ್ನು ಸತಾಯಿಸಿತು. ಯಾವುದಕ್ಕೂ ನಮಗೆ ಬೇಸರವಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸಭಾಧ್ಯಕ್ಷರ ಪೀಠಕ್ಕೆ ಕಳಂಕ ಅಂಟಬಾರದು ಎಂಬುದು ನಮ್ಮ ಕಾಳಜಿ. ಸ್ಪೀಕರ್‌ ಅವರು ಈ ಪ್ರಕರಣದಲ್ಲಿ ತಮ್ಮ ನಿಲುವು ಪ್ರಕಟಿಸಲಿ’ ಎಂದು ಆಗ್ರಹಿಸಿದರು.

‘ನಾನು ಈ ಹಿಂದೆಯೇ ನನ್ನ ನಿಲುವನ್ನು ಬಹಿರಂಗಪಡಿಸಿದ್ದೇನೆ. ಈಗ ಧರಣಿ ಮುಕ್ತಾಯಗೊಳಿಸಿ. ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ಸ್ಪೀಕರ್‌ ಹೇಳಿದರು.

ಬಳಿಕ ಬಿಜೆಪಿ ಸದಸ್ಯರು ಧರಣಿ ಅಂತ್ಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.