ADVERTISEMENT

ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 17:01 IST
Last Updated 30 ಏಪ್ರಿಲ್ 2019, 17:01 IST
ಬಳ್ಳಾರಿ ಲೋಕಸಭೆ ಕ್ಷೇತ್ರದ ನಕ್ಷೆ
ಬಳ್ಳಾರಿ ಲೋಕಸಭೆ ಕ್ಷೇತ್ರದ ನಕ್ಷೆ   

ಬಳ್ಳಾರಿ: 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ನಡುವಿನ ಹೊಂದಾಣಿಕೆಯಿಂದ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದ ಬಳಿಕ, ಬಿಜೆಪಿಯಲ್ಲಿ ಮಂಕುಕವಿದಿದೆ. ಕಾಂಗ್ರೆಸ್‌ನಿಂದ ಉಗ್ರಪ್ಪ ಅವರೇ ಸ್ಪರ್ಧಿಸಲಿರುವುದು ಖಚಿತ.

ಬಿಜೆಪಿ ಈಗ ಶ್ರೀರಾಮುಲು ಅವರನ್ನೇ ನೆಚ್ಚಿಕೊಂಡಂತೆ ಕಂಡರೂ ಆಕಾಂಕ್ಷಿಗಳು ಹೆಚ್ಚಿದ್ದಾರೆ, ಕಾಂಗ್ರೆಸ್‌– ಜೆಡಿಎಸ್‌ ನಡುವೆ ಮತ್ತೆ ಹೊಂದಾಣಿಕೆ ಏರ್ಪಟ್ಟರೆ ಕ್ಷೇತ್ರ ಕಾಂಗ್ರೆಸ್‌ ಪಾಲಾಗುತ್ತದೆ. ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲ.
––––––––––––––––––
ಆಕಾಂಕ್ಷಿಗಳು
ಕಾಂಗ್ರೆಸ್‌: ವಿ.ಎಸ್‌.ಉಗ್ರಪ್ಪ
ಬಿಜೆಪಿ: ಬಿ.ಶ್ರೀರಾಮುಲು, ಜೆ.ಶಾಂತಾ, ಎನ್‌.ವೈ.ಗೋಪಾಲಕೃಷ್ಣ, ಲಖನ್ ಜಾರಕಿಹೊಳಿ

ಮತದಾರರ ಸಂಖ್ಯೆ: 17,13,354
––––––––––––––––––––

ADVERTISEMENT

2014ರಲ್ಲಿ ಬಿಜೆಪಿಯ ಬಿ.ಶ್ರೀರಾಮುಲು, ಕಾಂಗ್ರೆಸ್‌ನ ಎನ್‌.ವೈ.ಹನುಮಂತಪ್ಪ ಅವರನ್ನು 85,144 ಮತಗಳ ಅಂತರದಿಂದ ಸೋಲಿಸಿದ್ದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ರಾಜೀನಾಮೆ ನೀಡಿದ್ದರಿಂದ 2018ರಲ್ಲಿ ಉಪ ಚುನಾವಣೆ ನಡೆದಿತ್ತು.

–––

ವಿಧಾನಸಭಾ ಕ್ಷೇತ್ರವಾರು ಬಲಾಬಲ
ಕಾಂಗ್ರೆಸ್‌: 6: ಬಳ್ಳಾರಿ ಗ್ರಾಮೀಣ, ವಿಜಯನಗರ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ
ಬಿಜೆಪಿ: 2; ಬಳ್ಳಾರಿ ನಗರ, ಕೂಡ್ಲಿಗಿ
ಒಟ್ಟು: 8

–––––––––––––––––––––––––––

2009

ವಿಜೇತರು: ಜೆ.ಶಾಂತಾ–ಬಿಜೆಪಿ: 4,02,213:ಶೇ 46.46

ಗೆಲುವಿನ ಅಂತರ: 2,243 ಶೇ 46.72

ಎನ್‌.ವೈ.ಹನುಮಂತಪ್ಪ (ಕಾಂಗ್ರೆಸ್‌)

ಇತರೆ: ಶೇ 6.82

–––––
2018

ವಿಜೇತರು: ವಿ.ಎಸ್‌.ಉಗ್ರಪ್ಪ (ಕಾಂಗ್ರೆಸ್‌): 6,28,365: ಶೇ 59.99

ಗೆಲುವಿನ ಅಂತರ: 2,43,161

ಜೆ.ಶಾಂತಾ (ಬಿಜೆಪಿ): 3,85,204: ಶೇ 23.21

ಇತರೆ: 13.8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.