ಬೆಂಗಳೂರು: ಶ್ವಾನದಳಕ್ಕೆ ಸೇರಿಸಿಕೊಳ್ಳಲು ಬೆಂಗಳೂರು ನಗರ ಪೊಲೀಸರು ಬೀದಿ ನಾಯಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಉತ್ತರಖಂಡದ ಪೊಲೀಸ‌್ ಶ್ವಾನದಳದಲ್ಲಿ ಈ ರೀತಿಯ ಪ್ರಯೋಗ ಯಶಸ್ವಿಯಾದ ಬಳಿಕ ಕರ್ನಾಟಕ ಪೊಲೀಸರು ಕೂಡ ಇದೇ ಹಾದಿಯನ್ನು ಹಿಡಿದಿದ್ದಾರೆ. ಬೀದಿಯಲ್ಲಿ ತಿರುಗುತ್ತಾ ಸಾರ್ವಜನಿಕರಿಂದ ನಿರ್ಲಕ್ಷ್ಯಕ್ಕೊಳಗಾಗಿ ತೊಂದರೆ ಅನುಭವಿಸುವ ದೇಶೀಯ ತಳಿಯ ನಾಯಿಗಳಿಗೆ ತರಬೇತಿ ನೀಡಲು ರಾಜ್ಯ ಪೊಲೀಸರು ಮುಂದಾಗಿದ್ದಾರೆ.
'ಪೊಲೀಸ್ ಶ್ವಾನದಳ ಘಟಕದ ಪ್ರಯೋಗದ ಭಾಗವಾಗಿ ಬೀದಿನಾಯಿಗಳಿಗೆ ನಾವು ತರಬೇತಿ ನೀಡುತ್ತಿದ್ದೇವೆ' ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೀದಿ ನಾಯಿಗಳಿಗೆ ತರಬೇತಿ ನೀಡುತ್ತಿರುವ ವಿಡಿಯೊವನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.