ADVERTISEMENT

‘ಪ್ರವಾಹ ಸಂತ್ರಸ್ತ ಕೊಡವರಿಗೆ ನೆರವಾಗ ಬನ್ನಿ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2018, 8:52 IST
Last Updated 17 ಆಗಸ್ಟ್ 2018, 8:52 IST
ಕರಡಿಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಗೊಂಡ ಗಂಜಿ ಕೇಂದ್ರದಲ್ಲಿ ಸಂತ್ರಸ್ತರು
ಕರಡಿಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಗೊಂಡ ಗಂಜಿ ಕೇಂದ್ರದಲ್ಲಿ ಸಂತ್ರಸ್ತರು   

ಬೆಂಗಳೂರು: ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಬೆಟ್ಟಗಳೇ ಕುಸಿಯುತ್ತಿವೆ. ನದಿ, ಹಳ್ಳ–ಕೊಳ್ಳಗಳು ಹರಿಯುವ ದಿಕ್ಕನ್ನೆ ಬದಲಿಸಿವೆ. ಇದರಿಂದ ಜನವಾಸದ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ.

ಜಲಪ್ರವಾಹದಿಂದ ಸಂಕಷ್ಟಕ್ಕೆ ಈಡಾದ ಕೊಡವರಿಗೆ ನೆರವಾಗಲು ‘ಬೆಂಗಳೂರಿನ ಕೊಡವ ಸಮಾಜ’ ಮುಂದೆ ಬಂದಿದೆ. ಮಳೆಯಿಂದ ಮನೆ–ಮಠ ಕಳೆದುಕೊಂಡು ನಿರಾಶ್ರಿತ ಆದವರಿಗಾಗಿ ಆಹಾರ ಪದಾರ್ಥ, ಬಟ್ಟೆ, ಬ್ಲಾಂಕೇಟ್ಸ್‌, ಟಾರ್ಪಲಿನ್‌, ಟೆಂಟ್‌ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದೆ.

‘ಉದಾರ ಮನಸ್ಕರು ಪ್ಯಾಕ್ಡ್‌ ಫುಡ್‌, ಹಾಲು, ಬಾಟಲ್ಸ್‌ ನೀರು, ಡ್ರೈಫ್ರುಟ್ಸ್‌, ಬಟ್ಟೆಗಳನ್ನು ಕೊಡಬಹುದು’ ಎಂದು ‘ಬೆಂಗಳೂರು ಕೊಡವ ಸಮಾಜ’ದ ಕಾರ್ಯದರ್ಶಿ ಸಿ.ಕೆ.ಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈಗಾಗಲೇ ಒಂದು ಲಾರಿಯಷ್ಟು ಸಾಮಗ್ರಿ ಸಂಗ್ರಹವಾಗಿದೆ. ವಾಹನ ಸಾಗುವಷ್ಟು ಪ್ರವಾಹ ತಗ್ಗಿದ ತಕ್ಷಣ, ಅವುಗಳನ್ನು ಅಗತ್ಯವಿರುವ ಜನರಿಗೆ ತಲುಪಿಸುತ್ತೇವೆ’ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ಕೆ ಸಮಾಜದ 50ಕ್ಕೂ ಹೆಚ್ಚು ಸದಸ್ಯರು ಕೈಜೋಡಿಸಿದ್ದಾರೆ.

ಸಾಮಗ್ರಿಗಳನ್ನು ನೀವೂ ಈವಿಳಾಸದಲ್ಲಿ ನೀಡಬಹುದು: ಕೊಡವ ಸಮಾಜ, ನಂ.7, 5ನೇ ಅಡ್ಡರಸ್ತೆ, ವಸಂತ ನಗರ, ಬೆಂಗಳೂರು.

ಸಂಪರ್ಕ:080 2226 0188 , 99014 91005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.