ADVERTISEMENT

Bengaluru-Mysuru Expressway | ವೇಗಕ್ಕೆ ಬ್ರೇಕ್ ಹಾಕಲು ರಡಾರ್ ವಾಹನ ವ್ಯವಸ್ಥೆ

ರಾಡಾರ್‌ ವಾಹನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 16:32 IST
Last Updated 4 ಜುಲೈ 2023, 16:32 IST
ರಾಮನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವೇಗದಿಂದ ಚಲಿಸುವ ವಾಹನಗಳ ಮೇಲೆ ನಿಗಾ ಇಟ್ಟಿರುವ ಕ್ಯಾಮೆರಾ ಅಳವಡಿಸಿರುವ ರಾಡಾರ್ ವಾಹನ
ರಾಮನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವೇಗದಿಂದ ಚಲಿಸುವ ವಾಹನಗಳ ಮೇಲೆ ನಿಗಾ ಇಟ್ಟಿರುವ ಕ್ಯಾಮೆರಾ ಅಳವಡಿಸಿರುವ ರಾಡಾರ್ ವಾಹನ   

ರಾಮನಗರ: ಬೆಂಗಳೂರು–ಮೈಸೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ಹೆದ್ದಾರಿಯಲ್ಲಿ ಅತಿ ವೇಗವಾಗಿ ಸಂಚಾರ ಮಾಡುವ ವಾಹನಗಳಿಗೆ ದಂಡ ವಿಧಿಸುವ ಸಲುವಾಗಿ ಎರಡು ರಡಾರ್ ವಾಹನ ವ್ಯವಸ್ಥೆ ಮಾಡಿದೆ.

ಹೆದ್ದಾರಿಯ ಜಿಲ್ಲಾ ವ್ಯಾಪ್ತಿಯಲ್ಲಿ ಕ್ಯಾಮೆರಾ ಇರುವ ಎರಡು ರಡಾರ್ ವಾಹನ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳು ಕುಂಬಳಗೂಡಿನಿಂದ ಚನ್ನಪಟ್ಟಣದವರೆಗೆ ಈ ವಾಹನ ಸಂಚಾರ ನಡೆಸಲಿವೆ. ಅತಿ ವೇಗವಾಗಿ ಸಂಚಾರ ಮಾಡುವ ವಾಹನಗಳನ್ನು ತಡೆದು ದಂಡ ವಿಧಿಸಲಿವೆ.

ಹೆದ್ದಾರಿಯಲ್ಲಿ ಗಂಟೆಗೆ 100 ಕಿ.ಮೀ. ವೇಗಮಿತಿ ನಿಯಮ ಅಳವಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡಿದರೆ ಈ ದಂಡ ನಿಯಮ ಅನ್ವಯಸಲಿದೆ. ಈಗಾಗಲೇ ರಾಮನಗರ ಮತ್ತು ಚನ್ನಪಟ್ಟಣ ಉಪ ವಿಭಾಗದ ವ್ಯಾಪ್ತಿಯ ಸಂಚಾರ ಠಾಣೆ ಪೊಲೀಸರು ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೆದ್ದಾರಿ ಎರಡು ಕಡೆ ಸ್ಪೀಡ್ ರಡಾರ್ ಬಳಕೆ ಮಾಡಿಕೊಂಡು ವಾಹನಗಳ ಮೇಲೆ ನಿಗಾ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.