ADVERTISEMENT

18ಕ್ಕೆ ಮಾಸ್ತಿ ಭವನದ ಶಿಲಾನ್ಯಾಸ

ಭವನ ನಿರ್ಮಾಣಕ್ಕೆ 2012ರಲ್ಲಿಯೇ ಹಂಚಿಕೆಯಾಗಿದ್ದ ಭೂಮಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 19:05 IST
Last Updated 13 ಏಪ್ರಿಲ್ 2022, 19:05 IST
ಮಾಸ್ತಿ ಭವನದ ನೀಲ ನಕ್ಷೆ
ಮಾಸ್ತಿ ಭವನದ ನೀಲ ನಕ್ಷೆ   

ಬೆಂಗಳೂರು: ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಕಡೆಗೂ ಅನುಮೋದನೆ ದೊರೆತಿದ್ದು, ಇದೇ18ಕ್ಕೆಶಿಲಾನ್ಯಾಸ ಸಮಾರಂಭ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ್ಞಾನಜ್ಯೋತಿ ಬಡಾವಣೆಯಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.ಈ ಭವನ ನಿರ್ಮಾಣಕ್ಕೆ 2012ರಲ್ಲಿಯೇ ಇಲ್ಲಿನ ಜ್ಞಾನ ಭಾರತಿ ಬಡಾವಣೆಯಲ್ಲಿ 20 ಸಾವಿರ ಚದರ ಅಡಿ ಜಾಗ ಗುರುತಿಸಲಾಗಿತ್ತು. ಸರ್ಕಾರವೇ ಸ್ಥಾಪಿಸಿದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂಮಿಯನ್ನು ಹಸ್ತಾಂತರಿಸಲಾಗಿತ್ತು. ಆದರೆ, ನಂತರ ಬಂದ ಸರ್ಕಾರಗಳು ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿರಲಿಲ್ಲ.

ಈ ಬಗ್ಗೆ 2021ರ ಅ.2ರಂದು ‘ಮಾಸ್ತಿ ಭವನ ಅಡಿಗಲ್ಲಿಗೆ ಅಡಿಗಡಿಗೂ ಅಡ್ಡಿ!’ ಎಂಬ ಶೀರ್ಷಿಕೆಯಡಿ‘ಪ್ರಜಾವಣಿ’ಯಲ್ಲಿವಿಶೇಷ ವರದಿಪ್ರಕಟವಾಗಿತ್ತು.

ADVERTISEMENT

ಮಾಸ್ತಿ ಭವನ ನಿರ್ಮಾಣಕ್ಕೆಹಂಚಿಕೆಯಾದ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿಯೇ ಟ್ರಸ್ಟ್ ನೋಂದಣಿ ಮಾಡಿಸಿದೆ. ಹಂಚಿಕೆಯಾದ ಭೂಮಿಯನ್ನು ಸಮತಟ್ಟು ಮಾಡಿಸಿ, ಕೊಳವೆ ಬಾವಿ ಕೊರೆಯಿಸಲಾಗಿದೆ. ನಿವೇಶನಕ್ಕೆ ಬೇಲಿಯನ್ನೂ ವಾರ್ಷಿಕ ಚಟುವಟಿಕೆಗೆ ಹಂಚಿಕೆಯಾದ ಅನುದಾನದಿಂದಲೇ ಟ್ರಸ್ಟ್ ಮಾಡಿಸಿದೆ.

‘ಮಾಸ್ತಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅನುಮೋದನೆ ನೀಡಿರುವುದು ಸಂತಸವನ್ನುಂಟು ಮಾಡಿದೆ.ಮಾಸ್ತಿ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಬೆಂಗಳೂರಿನಲ್ಲಿಯೇ ಕಳೆದಿದ್ದಾರೆ. ಇಲ್ಲಿಯೇ ಅವರ ಹೆಸರಿನಲ್ಲಿ ಭವನ ನಿರ್ಮಿಸಬೇಕೆಂಬ ಒತ್ತಾಯವಿತ್ತು. ಅದು ಈಗ ಸಾಕಾರವಾಗುತ್ತಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.