ADVERTISEMENT

ನ.29ರಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 16:15 IST
Last Updated 4 ಸೆಪ್ಟೆಂಬರ್ 2023, 16:15 IST
<div class="paragraphs"><p>ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗಾಗಿ ಸೋಮವಾರ ಕರೆದಿದ್ದ ವಿವಿಧ ಕಂಪನಿ ಸಿಇಒಗಳ ಜತೆಗಿನ ಸಮಾಲೋಚನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ&nbsp;ಮಾಹಿತಿ ತಂತ್ರಜ್ಞಾನ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಅವರಿಗೆ ಮಾಹಿತಿ ಕೈಪಿಡಿ ನೀಡಿದರು. ಏಕ್‌ರೂಪ್‌ ಕೌರ್‌, ಡಿ.ಕೆ.ಶಿವಕುಮಾರ್, ಕಿರಣ್‌ ಮಂಜುಂದಾರ್ ಶಾ ಇದ್ದರು </p></div>

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗಾಗಿ ಸೋಮವಾರ ಕರೆದಿದ್ದ ವಿವಿಧ ಕಂಪನಿ ಸಿಇಒಗಳ ಜತೆಗಿನ ಸಮಾಲೋಚನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ತಂತ್ರಜ್ಞಾನ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಅವರಿಗೆ ಮಾಹಿತಿ ಕೈಪಿಡಿ ನೀಡಿದರು. ಏಕ್‌ರೂಪ್‌ ಕೌರ್‌, ಡಿ.ಕೆ.ಶಿವಕುಮಾರ್, ಕಿರಣ್‌ ಮಂಜುಂದಾರ್ ಶಾ ಇದ್ದರು

   

–ಪ್ರಜಾವಾಣಿ ಚಿತ್ರ.

ಬೆಂಗಳೂರು: ನಗರದ ಅರಮನೆ ಆವರಣದಲ್ಲಿ ನ.29 ರಿಂದ ಡಿ.1ರ ವರೆಗೆ 26ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ.

ADVERTISEMENT

ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ. 26ನೇ ತಂತ್ರಜ್ಞಾನ ಶೃಂಗಸಭೆಯಲ್ಲಿ ಎಲೆಕ್ಟ್ರಾನಿಕ್ಸ್‌, ನವೋದ್ಯಮಗಳು, ಅಂತರರಾಷ್ಟ್ರೀಯ ಉಪಕರಣಗಳ ಪ್ರದರ್ಶನ, ದೇಶೀಯ, ಜಾಗತಿಕ ಹೂಡಿಕೆದಾರರ ಸಮಾವೇಶ ಸೇರಿದಂತೆ ಬಹು ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉದ್ಯಮ ಸಾಧಕ ಪ್ರಶಸ್ತಿಗಳು, ನವೋದ್ಯಮದ ಪ್ರೋತ್ಸಾಹ, ಗ್ರಾಮೀಣ ಮಾಹಿತಿ ತಂತ್ರಜ್ಞಾನ, ಜೈವಿಕ ವಿಭಾಗದ ರಸಪ್ರಶ್ನೆಗಳು, ಜೈವಿಕ ಪೋಸ್ಟರ್‌ಗಳ ಬಗ್ಗೆ ಸಮ್ಮೇಳನಗಳು ಜರುಗಲಿವೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾಗತಿಕ ಗಡಿಗಳನ್ನು ಮೀರಿ ಭಾರತದ ತಾಂತ್ರಿಕ ಶಕ್ತಿಯನ್ನು ಜಗತ್ತಿಗೆ ತೋರಿಸಲು ಶೃಂಗಸಭೆ ಸಿದ್ಧವಾಗುತ್ತಿದೆ. ಅದಕ್ಕಾಗಿ ಈ ಬಾರಿಯ ಸಮ್ಮೇಳನದ ಪರಿಕಲ್ಪನೆಯನ್ನು ‘ಬ್ರೇಕಿಂಗ್‌ ಬೌಂಡರೀಸ್‌’ ಎಂದು ಕರೆಯಲಾಗಿದೆ. ಜಪಾನ್‌, ಕೆನಡಾ, ಇಸ್ರೇಲ್‌, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ತಂತ್ರಜ್ಞಾನದ ಆವಿಷ್ಕಾರವನ್ನು ಪ್ರದರ್ಶಿಸುವರು ಎಂದು ಹೇಳಿದರು.  

ಬೆಂಗಳೂರು ಮತ್ತು ಮೈಸೂರಿನಲ್ಲಿ ಸೆಮಿಕಂಡಕ್ಟರ್‌ ಘಟಕಗಳ ಸ್ಥಾಪಿಸಲಾಗುವುದು. ಕರ್ನಾಟಕವನ್ನು ಉದ್ಯಮಸ್ನೇಹಿ ತಾಣವಾಗಿಸಲು ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುವುದು ಎಂದರು.

ಕೌಶಲ ಮಂಡಳಿ ರಚನೆಗೆ ಸಿ.ಎಂ ಒಲವು
ಕೌಶಲಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ ರಚಿಸಿದ ಮೊದಲ ರಾಜ್ಯ ಕರ್ನಾಟಕ. ಹಾಗೆ ಎಲ್ಲಾ ಪಾಲುದಾರರ ಸಹಯೋಗದೊಂದಿದೆ ಕೌಶಲ ಮಂಡಳಿ ರಚಿಸುವ ಚಿಂತನೆ ನಡೆದಿದೆ. ಮಂಡಳಿ ರಚನೆಯಾದರೆ ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಂತ್ರಜ್ಞಾನ ಕಂಪನಿಗಳ 100ಕ್ಕೂ ಹೆಚ್ಚು ಸಿಇಒಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಮಾತನಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೈವಿಕ ತಂತ್ರಜ್ಞಾನ ಗ್ರೂಪ್‌ ಅಧ್ಯಕ್ಷತೆ ಕಿರಣ್‌ ಮಜುಂದಾರ್ ಶಾ ಮಾಹಿತಿ ತಂತ್ರಜ್ಞಾನ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಐಟಿ– ಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಮತ್ತಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.