ಬೆಂಗಳೂರು: ಫೋನಿ ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ಒಡಿಶಾದಲ್ಲಿನ ವಿದ್ಯುತ್ ಸರಬರಾಜು ಜಾಲವನ್ನು ಮರುಸ್ಥಾಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) 317 ಸಿಬ್ಬಂದಿ ವಿಶೇಷ ರೈಲಿನಲ್ಲಿ ಸೋಮವಾರ ತೆರಳಿದರು.
ತಂಡದಲ್ಲಿ ನುರಿತ ಪವರ್ ಮ್ಯಾನ್, ಕಿರಿಯ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್‌ಗಳು ಇದ್ದಾರೆ. ತಂಡದ ಸದಸ್ಯರು ಒಡಿಶಾ ಸರ್ಕಾರ ರೂಪಿಸಿರುವ ಕಾರ್ಯ ಯೋಜನೆಯಂತೆ 15 ದಿನಗಳು ಕಾರ್ಯನಿರ್ವಹಿಸಿ ಜಾಲವನ್ನು ಸರಿಪಡಿಸಲು ಶ್ರಮಿಸಲಿದ್ದಾರೆ.
ಒಡಿಶಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿ ಸಿಬ್ಬಂದಿ ಕಳುಹಿಸಿಕೊಡುವಂತೆ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.