ಉತ್ತರ ಕನ್ನಡ : ಭಟ್ಕಳ ಕ್ಷೇತ್ರಕ್ಕೆ ಎರಡನೆ ಬಾರಿಗೆ ಶಾಸಕರಾಗಿರುವ ಮಂಕಾಳ ವೈದ್ಯ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.
2013ರಲ್ಲಿ ಮೊದಲ ಬಾರಿಗೆ ಮಂಕಾಳ ಅವರು ಭಟ್ಕಳ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರೂ ಪಕ್ಷ ಸಂಘಟನೆ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 32 ಸಾವಿರ ಮತಗಳಿಂದ ಸೋಲಿಸಿದ್ದರು.
2005, 2010ರಲ್ಲಿ ಜಿಲ್ಲಾ ಎರಡು ಅವಧಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದು ಅವರಿಗೆ ರಾಜಕೀಯ ಅನುಭವ ನೀಡಿದೆ.
ಮಂಕಾಳ ವೈದ್ಯ ಅವರ ಕಿರು ಪರಿಚಯ
ಪೂರ್ಣ ಹೆಸರು : ಮಂಕಾಳ ವೈದ್ಯ
ವಯಸ್ಸು : 51
ಜಾತಿ : ಮೀನುಗಾರ (ಮೊಗೇರ)
ಶಿಕ್ಷಣ : 8ನೇ ತರಗತಿ
ಎಷ್ಟನೆ ಬಾರಿ ಶಾಸಕ : ಎರಡನೇ ಬಾರಿ
ಹಿಂದೆ ನಿರ್ವಹಿಸಿದ್ದ ಖಾತೆ : ಇಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.