ಬೆಂಗಳೂರು: ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸಂಭ್ರಮದ ಹೊತ್ತಿನಲ್ಲಿ ವಿಧಾನಸೌಧದ ಆವರಣದಲ್ಲಿ ‘ನಾಡದೇವಿ ಭುವನೇಶ್ವರಿ’ಯ 25 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಗುರುವಾರ ಬೆಳಿಗ್ಗೆ 10.50ಕ್ಕೆ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯು ಈ ಪ್ರತಿಮೆ ಸ್ಥಾಪಿಸುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಭುವನೇಶ್ವರಿಯ ಕಂಚಿನ ಪ್ರತಿಮೆ ಈಗಾಗಲೇ ತಯಾರಾಗಿದೆ. ಇದರ ಶಿಲ್ಪಿ ಬೆಂಗಳೂರಿನ ಕೆ.ಶ್ರೀಧರಮೂರ್ತಿ. ಕಂಚಿನ ಪ್ರತಿಮೆಯ ಹಿಂಭಾಗ ಕರ್ನಾಟಕದ ಭೂಪಟ ಇರಲಿದೆ. ಈ ಉಬ್ಬು ಶಿಲ್ಪದ ಎತ್ತರ 30 ಅಡಿ. ಒಟ್ಟಾರೆ ಎತ್ತರ ನೆಲ ಮಟ್ಟದಿಂದ 41 ಅಡಿಗಳು. ಒಟ್ಟು ಯೋಜನೆಗೆ ₹21.24 ಕೋಟಿ ವೆಚ್ಚವಾಗಲಿದೆ.
ಪ್ರತಿಮೆ ನಿರ್ಮಾಣವಾಗಲಿರುವ ಜಾಗದ ವಿಸ್ತೀರ್ಣ ಉದ್ಯಾನವನ ಸೇರಿ 4,500 ಚದರ ಮೀಟರ್‌ನಷ್ಟು ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.