ADVERTISEMENT

ಲಡಾಕ್‌ ಟು ಕನ್ಯಾಕುಮಾರಿ ಸೈಕಲ್‌ ಜಾಥಾ: ಯೋಧರ ಕುಟುಂಬಗಳ ನೆರವಿಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 8:00 IST
Last Updated 8 ಜುಲೈ 2018, 8:00 IST
   

ಮಂಗಳೂರು: ಹುತಾತ್ಮ ಯೋಧರು ಮತ್ತು ಗಾಯಾಳು ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಲಡಾಖ್‌ನಿಂದ ಕನ್ಯಾಕುಮಾರಿವರೆಗೆ ಮನೋಜ್‌ ಕುಮಾರ್‌ ಸೈಕಲ್‌ ಜಾಥಾ ಕೈಗೊಂಡಿದ್ದಾರೆ.

ಭಾರತೀಯ ನೌಕಾಪಡೆ ಅಕಾಡೆಮಿಯ‌ ಇನ್‌ಸ್ಟ್ರಕ್ಟರ್ ಮನೋಜ್‌ಕುಮಾರ್ ಭಾನುವಾರ ಮಂಗಳೂರಿಗೆ ಬಂದರು.

ಇವರು ಬೈಸಿಕಲ್‌ನಲ್ಲಿ ಒಟ್ಟು 4,000 ಕಿಲೋಮೀಟರ್ ಕ್ರಮಿಸಲಿದ್ದಾರೆ. ಜೂನ್ 6ರಂದು ಆರಂಭವಾಗಿರುವ ಬೈಸಿಕಲ್ ಯಾತ್ರೆ ಜುಲೈ 16ರಂದು ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ.

ADVERTISEMENT

ಭಾನುವಾರ ಮಧ್ಯಾಹ್ನ ಮಂಗಳೂರಿನ ಬಲ್ಲಾಳ್ ಭಾಗ್‌ಗೆ ಬಂದ ಅವರನ್ನು ಟ್ರ್ಯಾಕ್ ಅಂಡ್ ಟ್ರಯಲ್ ಬೈಸಿಕಲ್ ಮಳಿಗೆಯ ಪ್ರತಿನಿಧಿಗಳು ಹೂಮಾಲೆ ಹಾಕಿ ಸ್ವಾಗತಿಸಿದರು.

'ನಾನು ಎಂಟು ವರ್ಷಗಳಿಂದ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಹುತಾತ್ಮ ಯೋಧರು ಮತ್ತು ಗಾಯಾಳು ಯೋಧರ ನೆರವಿಗೆ ನಿಲ್ಲುವಂತೆ ಜನರಿಗೆ ಮನವಿ ಮಾಡುವುದು ನನ್ನ ಉದ್ದೇಶ. ಪ್ರತಿದಿನ 80ರಿಂದ 100 ಕಿ.ಮೀ. ಕ್ರಮಿಸುತ್ತಿದ್ದೇನೆ' ಎಂದು ಮನೋಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.