ADVERTISEMENT

ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:46 IST
Last Updated 24 ಜೂನ್ 2024, 15:46 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಬೆಂಗಳೂರು: ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ–ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಕುರಿತು ಜನನ–ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸೋಮವಾರ ಸುತ್ತೋಲೆ ಹೊರಡಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ–ಮರಣಗಳಾದ 21 ದಿನಗಳ ಒಳಗೆ ನೋಂದಣಿ ಮಾಡಿಕೊಂಡು ಉಚಿತವಾಗಿ ಪ್ರಮಾಣ ಪತ್ರ ವಿತರಿಸಬೇಕು. 21 ದಿನಗಳ ನಂತರ ಮಾಹಿತಿ ನೀಡುವ ಪ್ರಕರಣಗಳಲ್ಲಿ ₹2ಶುಲ್ಕ ಪಡೆದು ನೋಂದಣಿ ಮಾಡಬೇಕು. 30 ದಿನಗಳ ತರುವಾಯ ಕಾರ್ಯದರ್ಶಿಗಳು ನೋಂದಣಿ ಮಾಡಬಾರದು ಎಂದು ಸೂಚಿಸಿದೆ.

ADVERTISEMENT

ಜನನ–ಮರಣಗಳು ನಡೆದು 30 ದಿನಗಳ ತರುವಾಯ ಮಾಹಿತಿ ನೀಡುವ ಜನನ–ಮರಣಗಳ ನೋಂದಣಿ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗೆ ನೀಡಲಾಗಿದೆ. 

ಜನರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ತಹಶೀಲ್ದಾರ್‌ ಅವರ ಲಿಖಿತ ಅನುಮತಿ ಪಡೆದು ನೋಂದಣಿ ಮಾಡಬೇಕು ಎಂದು ಸೂಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.