ಬೆಂಗಳೂರು:‘ಅದು ಬಹಳ ತೀವ್ರವಾಗಿದ್ದ ಸಂಬಂಧ, ನಾವು ಪ್ರೀತಿಯ ಆಳದಲ್ಲಿದ್ದೆವು. ಆತನಿಗೆ 23 ವರ್ಷ ವಯಸ್ಸಾಗಿದ್ದಾಗಲೇನಾವು ಸಂಬಂಧ ಹೊಂದಿದ್ದೆವು. ಇದನ್ನು ಮತ್ತಷ್ಟು ಕೆದಕಲು ನನಗೆ ಮನಸ್ಸಿಲ್ಲ. ಇದರಿಂದಯಾರಿಗೂ ಪ್ರಯೋಜನವಿಲ್ಲ. ನನ್ನ ಪಾಲಕರಿಗೆ ಇದರಿಂದ ನೋವುಂಟಾಗುತ್ತದೆ...’
–ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕುರಿತು ಉದ್ಯಮಿಡಾ.ಸೋಮ್ ದತ್ತಾ ಮಾಡಿರುವ ಟ್ವೀಟ್ ಇದು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಹೆಸರನ್ನು ಅಂತಿಮಗೊಳಿಸಿದ್ದಕ್ಕೆಪಕ್ಷದ ಒಳಗೆ ಮತ್ತು ಹೊರಗೆ ಚರ್ಚೆ ಮುಂದುವರಿದಿದೆ. ಇದೇ ವೇಳೆ ತೇಜಸ್ವಿ ಸೂರ್ಯ ಅವರ ಹಿಂದಿನ ಗೆಳತಿ ಎಂಬಂತೆ ಡಾ.ಸೋಮ್ ದತ್ತಾಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮಿಬ್ಬರ ನಡುವಣ ಹಿಂದಿನ ಕಥೆಯನ್ನು ತೆರೆದಿಟ್ಟಿದ್ದಾರೆ.ಹೂಡಿಕೆ ಸಲಹೆಗಾರ್ತಿಯೂ ಆಗಿರುವ ಸೋಮ್ ದತ್ತಾ ಟ್ವೀಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹಂಚಿಕೆಯಾಗುತ್ತಿದ್ದು, ಚರ್ಚೆ ಕಾವೇರಿದೆ.
ಮೀಟೂ ಆರೋಪದಂತೆ ಬಿಂಬಿತವಾಗಿರುವ ಸರಣಿ ಟ್ವೀಟ್‌ಗಳು ರಾಜಕೀಯ ತಿರುವು ಪಡೆಯುತ್ತಿದ್ದಂತೆ ಆಕೆ ಎಲ್ಲವನ್ನೂ ಅಳಿಸಿ ಹಾಕಿದ್ದಾರೆ. ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕರ್ನಾಟಕ ಕಾಂಗ್ರೆಸ್ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ. ‘ಬಿಜೆಪಿಯಿಂದ ಇಂಥ ಅಭ್ಯರ್ಥಿಯ ಆಯ್ಕೆ..?’, ‘ಹೆಣ್ಣಿಗೆ ಅನ್ಯಾಯ, ಮಿಟೂ... ’ ಎಂದು ಬರೆದು ಅನೇಕರುತೇಜಸ್ವಿ ಹಾಗೂ ಸೋಮ್ ದತ್ತಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಇರಿಸುಮುರುಸಿಗೆ ಒಳಗಾಗಿರುವುದಾಗಿಸೋಮ್ ದತ್ತಾ ಪ್ರತಿಕ್ರಿಯಿಸಿದ್ದು,ಎಲ್ಲವನ್ನೂ ಇಲ್ಲಿಗೆ ಸಾಕು ಮಾಡುವಂತೆ ಹಿಂದಿನ ಟ್ವೀಟ್‌ಗಳನ್ನೂ ಅಳಿಸಿ ಹಾಕಿದ್ದಾರೆ.
ಐದು ವರ್ಷಗಳ ಹಿಂದೆಯೇ ತೇಜಸ್ವಿ ಸೂರ್ಯ ಅವರೊಂದಿಗೆ ಸಂಬಂಧ ಇದ್ದುದನ್ನುಸೋಮ್ ದತ್ತಾ ಟ್ವೀಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇಬ್ಬರ ನಡುವೆ ಆಳವಾದ ಪ್ರೀತಿಯೂ ಇತ್ತು ಎಂಬುದನ್ನೂ ತೆರೆದಿಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಹೆಸರು ಬಹಿರಂಗಗೊಳ್ಳುತ್ತಿದ್ದಂತೆ ಸಮಾಜದ ಹಲವು ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಲೇಖಕಿ ಶೆಫಾಲಿ ವೈದ್ಯ ಅವರ ಬೆಂಬಲ ಸಂದೇಶಕ್ಕೆ ಸೋಮ್ ದತ್ತಾ ಪ್ರತಿಕ್ರಿಯಿಸಿ, 'ತೇಜಸ್ವಿ ಕುರಿತಾಗಿ ಪೂರ್ಣ ಸತ್ಯವನ್ನು ತಿಳಿಯದೆ ಕುರುಡಾಗಿ ಆತನಿಗೆ ನೀವು ಬೆಂಬಲಿಸಬೇಡಿ. ಮಹಿಳೆಯನ್ನು ಶೋಷಿಸುವ, ಹೆಣ್ಣಿನ ಮೇಲೆ ಹಲ್ಲೆ ಮಾಡುವವ್ಯಕ್ತಿ ನಮ್ಮ ಮುಂದಾಳು ಆಗಲು ನೀವು ಬಯಸುತ್ತೀರಾ? ಆ ಬಗ್ಗೆ ಸಾಕ್ಷ್ಯ ಬೇಕೆ? ನಾನು ಹಂಚಿಕೊಳ್ಳುತ್ತೇನೆ. ಪ್ರತಿಯೊಬ್ಬ ಹಿಂದೂ ಸಹ ಧಾರ್ಮಿಕ ವ್ಯಕ್ತಿಯಲ್ಲ ಹಾಗೂ ಉತ್ತಮ ಭಾಷಣಗಳು ಉತ್ತಮ ವ್ಯಕ್ತಿಯನ್ನು ಸೂಚಿಸುವುದಿಲ್ಲ..’ ಎಂದಿದ್ದಾರೆ.
ಮತ್ತೊಬ್ಬರಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ,'ಐದು ವರ್ಷಗಳು ಆತನ ಬಂಧನದಲ್ಲಿ ಸಿಲುಕಿ ನಲುಗಿ ಹೋಗಿದ್ದೇನೆ. ಕಠಿಣ ಕ್ರಮಗಳ ಮೂಲಕ ಅದರಿಂದ ಬಿಡಿಸಿಕೊಳ್ಳುವ ನಿರ್ಧಾರ ಮಾಡುವವರೆಗೂ ನಾನು ಅದನ್ನು ಅನುಭವಿಸಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು, ನನ್ನನ್ನು ನಂಬಿ,ನಾನು ಆತನಿಗೆ ಮೊದಲ ಬಲಿಪಶುವಲ್ಲ. ನಾನೇ ಕೊನೆಯವಳಾಗಿರಲೂ ಸಾಧ್ಯವಿಲ್ಲ....’ ಎಂದು ಬರೆದುಕೊಂಡಿದ್ದರು.
'ಚುನಾವಣೆಗೆ ಟಿಕೆಟ್ ನೀಡುವುದಕ್ಕೂ ಮುನ್ನ ಪಕ್ಷ ಅವರ ಹಿನ್ನೆಲೆಯನ್ನುಪರಿಶೀಲಿಸುವುದಿಲ್ಲವೇ? ನನ್ನ ಆಯ್ಕೆಯಿಂದಾಗಿ ನನ್ನ ಪಾಲಕರು ಬಹಳಷ್ಟು ನೋವುಅನುಭವಿಸಿದ್ದಾರೆ. ಅವರಿಗೆ ಮತ್ತಷ್ಟು ನೋವು ನೀಡಲು ಆಗದು..’ ಎಂದು ತಮ್ಮ ಅನುಭವ ಬರೆದುಕೊಂಡಿದ್ದಾರೆ.
ಈ ಟ್ವೀಟ್‌ಗಳನ್ನು ಅಳಿಸಿ ಹಾಕಿದ್ದರೂ ಮತ್ತೆ ಮತ್ತೆ ಸೋಮ್ ದತ್ತಾ ಅವರನ್ನು ಟ್ಯಾಗ್ ಮಾಡಿ ವಿಷಯ ಪ್ರಸ್ತಾಪಿಸುತ್ತಿರುವ ಟ್ವೀಟಿಗರಿಗೆ, ಇಲ್ಲಿಗೆ ಸಾಕು ಮಾಡುವಂತೆ ಮನವಿ ಮಾಡಿದ್ದಾರೆ. 'ಪ್ರಚಾರ ಅಪೇಕ್ಷಿಸುವ ಸಾಮಾನ್ಯ ಹುಡುಗಿ ನಾನಲ್ಲ. ನನಗೆ ಈಗಾಗಲೇ ಸಾಕಷ್ಟು ಜನಮನ್ನಣೆ ಇದೆ. ನಾನು ಮಹಿಳೆ ಹಾಗೂ ನನಗೆ ಹೇಳಿಕೊಳ್ಳುವ ದನಿಯಿದೆ. ನಾನು ಪ್ರೀತಿ ಮತ್ತು ನೋವು ಎರಡನ್ನೂ ಅನುಭವಿಸುತ್ತೇನೆ. ನಾನು ಮಾತನಾಡುತ್ತಿದ್ದೇನೆ ಎಂದ ಕೂಡಲೇ ನನ್ನ ಕಡೆಗೆ ಎಲ್ಲರ ಗಮನ ಸೆಳೆಯಬೇಕು ಎಂದಲ್ಲ. ಇದರರ್ಥ ನನಗೂ ದನಿಯಿದೆ. ದಯಮಾಡಿ ಅದನ್ನು ಗೌರವಿಸಿ’ ಎಂದು ಬರೆದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ಪ್ರಕಟಿಸಿಕೊಂಡಿರುವ ಹಲವು ಫೋಟೊಗಳ ಜತೆಗೆ ತೇಜಸ್ವಿ ಸೂರ್ಯ ಹೆಸರು ಟ್ಯಾಗ್ ಮಾಡಲಾಗಿರುವುದನ್ನು ಗಮನಿಸಬಹುದು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.