ADVERTISEMENT

ಕಾಂಗ್ರೆಸ್‌ ಭ್ರಷ್ಟಾಚಾರ ಸದನದಲ್ಲಿ ಪ್ರಸ್ತಾಪ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 21:26 IST
Last Updated 4 ಜುಲೈ 2024, 21:26 IST
ಕಾಂಗ್ರೆಸ್‌, ಬಿಜೆಪಿ
ಕಾಂಗ್ರೆಸ್‌, ಬಿಜೆಪಿ    

ಬೆಂಗಳೂರು: ಮೈಸೂರು ‘ಮುಡಾ’, ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿಚಾರವನ್ನು ವಿಧಾನಮಂಡಲ ಅಧಿವೇಶನಲ್ಲಿ ಪ್ರಸ್ತಾಪ ಮಾಡಲು ಗುರುವಾರ ನಡೆದ ಬಿಜೆಪಿ ಪ್ರಮುಖರ ಸಮಿತಿ ಸಭೆ ನಿರ್ಧಾರ ತೆಗೆದುಕೊಂಡಿದೆ.

ಈ ಕುರಿತು ಮಾಹಿತಿ ನೀಡಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ, ‘ಮುಡಾ ಹಗರಣ ಸಂಬಂಧ ರಾಜೀನಾಮೆ ನೀಡುವುದು ಅಥವಾ ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುವುದಷ್ಟೇ ಮುಖ್ಯಮಂತ್ರಿ ಮುಂದಿದೆ. ಸಾರ್ವಜನಿಕವಾಗಿ ಬೆತ್ತಲಾದರೂ,  ಅದಕ್ಕೂ ಸಮರ್ಥನೆ ಕೊಡುವುದಾದರೆ ಇನ್ನೇನು ಹೇಳಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಮೈಸೂರಿನ ಜನರೇ ಇದೊಂದು ಮಹಾಮೋಸ ಎಂದು ಹೇಳುತ್ತಿದ್ದಾರೆ. ಭೂಮಿ ಖರೀದಿ ಬಳಿಕ ಇವರ ಭಾಮೈದ ಜಿಪಿಎ ಮಾಡಿಕೊಂಡಿದ್ದರು. ಅಲ್ಲಿಂದಲೇ ಅಪರಾಧ, ಅಲ್ಲಿಂದಲೇ ಮೋಸ ನಡೆದಿದೆ. ಯಾರದೋ ಆಸ್ತಿಯನ್ನು ಇನ್ಯಾರೋ ಜಿಪಿಎ ಮಾಡಿಸಿಕೊಳ್ಳುವ ಮೂಲಕ ಹಗರಣ ನಡೆದಿದೆ’ ಎಂದರು.

ADVERTISEMENT

‘224 ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೆಳಹಂತದ ಸಿದ್ಧತೆ ನಡೆಸಲು ನಿರ್ಧರಿಸಲಾಗಿದೆ. ಸಹಕಾರಿ ಕ್ಷೇತ್ರದ ಚುನಾವಣೆಗೆ ತಂಡಗಳ ರಚನೆ, ಮೇಲ್ವಿಚಾರಣೆ, ಮಾರ್ಗದರ್ಶನ ಸೇರಿದಂತೆ ಹಲವು ವಿಷಯಗಳನ್ನು ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ’ ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.