ADVERTISEMENT

ಐ.ಟಿ ವಿರೋಧ ನೀತಿ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 15:12 IST
Last Updated 4 ಏಪ್ರಿಲ್ 2024, 15:12 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಬೆಂಗಳೂರು: ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ(ಐ.ಟಿ) ಕ್ಷೇತ್ರದ ವಿರೋಧಿ ನೀತಿ ಅನುಸರಿಸುತ್ತಿರುವುದರಿಂದ ಐಟಿ ಉದ್ಯಮಗಳು ಬೆಂಗಳೂರು ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್‌.ದತ್ತಾತ್ರಿ ಹೇಳಿದರು.

ಬೆಂಗಳೂರಿನಲ್ಲಿ ನೀರು ಸಿಗುತ್ತಿಲ್ಲ, ಆದ್ದರಿಂದ ಐಟಿ ಉದ್ಯಮಗಳು ಕೇರಳಕ್ಕೆ ಬರಲಿ ಎಂದು ಅಲ್ಲಿನ ಸಚಿವರೊಬ್ಬರು ಕರೆ ನೀಡಿರುವುದು ಕರ್ನಾಟಕಕ್ಕೆ ಅವಮಾನಕರ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ. ಇದಕ್ಕೆ ಕುಡಿಯುವ ನೀರಿನ ಕುರಿತು ಸಮರ್ಪಕ ನೀತಿ ಇಲ್ಲದೇ ಇರುವುದೇ ಕಾರಣ. ನೀರಿನ ಟ್ಯಾಂಕರ್‌ಗಳಿಗೆ ಸರಿಯಾದ ನೀತಿ ರೂಪಿಸಿಲ್ಲ. ಐಟಿ ಉದ್ಯೋಗಿಗಳಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ಸಿಗುತ್ತಿಲ್ಲ. ಟ್ಯಾಂಕರ್‌ ಮಾಫಿಯಾ ಸುಲಿಗೆ ಮಾಡುತ್ತಿದ್ದರೂ ಸರ್ಕಾರ ಮೌನವಹಿಸಿದೆ ಎಂದು ಅವರು ದೂರಿದರು.

ಕೊಳವೆ ಬಾವಿ ಕೊರೆಸುವ ವೆಚ್ಚವೂ ಬಹುತೇಕ ದುಪ್ಪಟ್ಟಾಗಿದೆ. ಈ ವಿಷಯದಲ್ಲೂ ಸರಿಯಾದ ನೀತಿ ಇಲ್ಲ. ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದೆ, ಐಟಿ ಉದ್ಯೋಗಿಗಳು ರಸ್ತೆಯಲ್ಲಿ ಬಹಳ ಸಮಯ ಕಳೆಯುವ ದುಃಸ್ಥಿತಿ ಬಂದಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ, ಟ್ರಾಫಿಕ್‌ ಸಮಸ್ಯೆ ಇರುವಲ್ಲಿಗೆ ತೆರಳಿ, ಅಲ್ಲಿ ನಿಂತು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದ್ದರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.